dtvkannada

ಉಪ್ಪಿನಂಗಡಿ: ಕವಿ, ಸಾಹಿತ್ಯ, ಬರಹಗಾರರನ್ನೊಳಗೊಂಡ ಪೆನ್ ಪಾಯಿಂಟ್ ಸ್ನೇಹವೇದಿಕೆಯ ವತಿಯಿಂದ ಬೃಹತ್ ಇಫ್ತಾರ್ ಕೂಟವು, ಇಂದು ಉಪ್ಪಿನಂಗಡಿಯ ಮೆಕ್ಸಿಕೋ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಜಾಲತಾಣದಲ್ಲಿ ಯಶಸ್ವಿಯಾಗಿ ಕಾರ್ಯಚರಿಸುತ್ತಾ, ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಪೆನ್ ಪಾಯಿಂಟ್ ಸ್ನೇಹವೇದಿಕೆಯು ತಮ್ಮ ಬಳಗದ ಸದಸ್ಯರಿಗಾಗಿ ಏರ್ಪಡಿಸಿದ ಇಫ್ತಾರ್ ಕೂಟವಾಗಿತ್ತು ಇದು.

ಕಾರ್ಯಕ್ರಮದಲ್ಲಿ ಕವಿ ಜಲೀಲ್ ಮುಕ್ರಿ, ಸಾಮಾಜಿಕ ಕಾರ್ಯಕರ್ತ ಇರ್ಶಾದ್ ಯುಟಿ, ಪತ್ರಕರ್ತ ಶಫೀಕ್ ವಳಾಲ್ ಸೇರಿದಂತೆ ಹಲವಾರು ಪೆನ್ ಪಾಯಿಂಟ್ ಸದಸ್ಯರು ಭಾಗವಹಿಸಿದ್ದರು.

ಬೃಹತ್ ಇಫ್ತಾರ್ ಕೂಟವು ಯಶಸ್ವಿಯಾಗಲು ಶ್ರಮವಹಿಸಿದ ಪೆನ್ ಪಾಯಿಂಟ್ ವಾಟ್ಸಪ್ ಗ್ರೂಪ್ ಸದಸ್ಯರಾದ ಜುನೈದ್ ಬಿಸಿ, ಸರ್ಫ್ರಾಝ್ ವಳಾಲ್, ಸಿದ್ದೀಕ್ ಮಾಸ್ಟರ್ ಅರಬಿ ಅವರಿಗೆ ಪೆನ್ ಪಾಯಿಂಟ್ ಸ್ನೇಹವೇದಿಕೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!