ಬೆಂಗಳೂರು: ಕೊರೊನಾ ಕಾರಣದಿಂದ ಸರ್ಕಾರ ಎರಡು ವರ್ಷ ರಂಜಾನ್ ಹಬ್ಬಕ್ಕೆ ಕಠಿಣ ನಿಯಮಗಳನ್ನ ಜಾರಿಗೊಳಿಸಿತ್ತು. ಮಸೀದಿಯಲ್ಲಿ ಪ್ರಾರ್ಥನೆಗೆ ಜನ ಸೇರುವುದನ್ನು ನಿರ್ಬಂಧಿಸಿ ಟಫ್ ರೂಲ್ಸ್ ಜಾರಿಗೊಳಿಸಿತ್ತು. ಈ ಬಾರಿಯಾದರೂ ಯಾವುದೇ ಅಡಚಣೆಯಿಲ್ಲದೆ ಹಬ್ಬವನ್ನು ಆಚರಿಸಬಹುದು ಅಂತ ಯೋಚಿಸುತ್ತಿರುವಾಗ ಮತ್ತೆ ಕೊರೊನಾ ನಾಲ್ಕನೇ ಅಲೆ ಆತಂಕ ಶುರುವಾಗಿದೆ. ಹೀಗಾಗಿ ಈ ವರ್ಷವೂ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆಯಿದೆ.
ಕೊರೊನಾ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದೆ. ಇಂದಿನಿಂದ ಈ ರೂಲ್ಸ್ ಜಾರಿಯಾಗಲಿದೆ. ಆದರೆ ದಂಡ ವಿಧಿಸಲ್ಲ ಅಂತ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಕೊರೊನಾ ಹೆಚ್ಚಾದರೆ ಮಾತ್ರ ದಂಡ ಹಾಕುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರು, ಮಾರ್ಷಲ್ಸ್ ಮಾಸ್ಕ್ ಬಗ್ಗೆ ಅರಿವು ಮೂಡಿಸುತ್ತಾರೆ.
ಭಾರತದಲ್ಲಿ 2541 ಮಂದಿಗೆ ಕೊರೊನಾ ಸೋಂಕು:
ನಿನ್ನೆ (ಏಪ್ರಿಲ್ 25) ದೇಶದ ವಿವಿಧೆಡೆ ಒಟ್ಟು 2,541 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 30 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 43,06,008 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ 16,522 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,22,223ಕ್ಕೆ ಮುಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳು ಶೇ 0.04 ಆಗುತ್ತದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣವು ಶೇ 98.75 ಇದೆ.
ಇನ್ನು ಕರ್ನಾಟಕದಲ್ಲಿ ನಿನ್ನೆ(ಏಪ್ರಿಲ್ 25) 64 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 1671 ಸಕ್ರಿಯ ಪ್ರಕರಣಗಳಿದ್ದು, 4637 ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಸೋಂಕಿನಿಂದ 69 ಮಂದಿ ಚೇತರಿಸಿಕೊಂಡು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಪಾಸಿಟಿವಿಟಿ ಪ್ರಮಾಣ ಶೇ 1.38 ಇದೆ. ಇದು ವಾರದ ಸರಾಸರಿಗಿಂತಲೂ ಹೆಚ್ಚು ಎನ್ನುವುದು ಗಮನಾರ್ಹ ಸಂಗತಿ. ವಾರದ ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ 0.96 ಇದೆ.
ರಮ್ಜಾನ್ ಹಬ್ಬ ಹತ್ತಿರ ಬರುವಾಗ ಕೋರೋನ ಜಾಸ್ತಿ ಆಗ್ತಾ ಇದೆ. ಒಟ್ಟಿನಲ್ಲಿ ಮುಸ್ಲಿಮರು ಹಬ್ಬ ಮಾಡ ಬಾರದು ಎಂಬುವುದು ಸರ್ಕಾರದ ಉದ್ದೇಶ.