dtvkannada

ಮಂಗಳೂರು: ಇಲ್ಲಿನ ಎಂ. ಜಿ ರಸ್ತೆಯಲ್ಲಿ ಪಿವಿಎಸ್‌ ಕಡೆಯಿಂದ ಲಾಲ್‌ಭಾಗ್‌ ಕಡೆಗೆ ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿರುವ ವಿಡಿಯೋವನ್ನು ಶಾಸಕ ವೇದವ್ಯಾಸ್ ಕಾಮತ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಸಂಬಂಧಪಟ್ಟ ವಾಹನ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದ್ದಾರೆ. ಬೈಕ್ ಮುಂಭಾಗದಲ್ಲಿ ಇಬ್ಬರು ಹೆಣ್ಣು ಮಕ್ಕಳು, ಒಬ್ಬಾಕೆ ಪೆಟ್ರೋಲ್ ಟ್ಯಾಂಕ್‌ ಮೇಲೆ ಕುಳಿತುಕೊಂಡಿದ್ದಾಳೆ.

ಇನ್ನೊಬ್ಬಳು ನಿದ್ದೆ ಮಾಡುತ್ತಿದ್ದಾಳೆ. ನಂತರದಲ್ಲಿ ಹೆಲ್ಮೆಟ್‌ ಹಾಕಿರುವ ಯುವಕ ಬೈಕ್‌ ಚಲಾಯಿಸುತ್ತಿದ್ದಾನೆ.ಆತನ ಹಿಂಭಾಗದಲ್ಲಿ ಇನ್ನೊಬ್ಬ ಹುಡುಗ ಕುಳಿತ್ತಿದ್ದು, ಅವನಲ್ಲಿ ಹೆಲ್ಮೆಟ್ ಇಲ್ಲ, ಕೊನೆಯಲ್ಲಿ ಹೆಲ್ಮೆಟ್ ಧರಿಸಿದ ಮಹಿಳೆ ಕುಳಿತ್ತಿದ್ದಾಳೆ.

View this post on Instagram

A post shared by Vedavyas Kamath (@vedavyasbjp)

ಇಷ್ಟು ಜನರನ್ನು ಕುಳ್ಳಿರಿಸಿಕೊಂಡಿದ್ದರೂ ಬೈಕ್ ಸವಾರ ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಅಪಾಯಕಾರಿಯಾಗಿ ಕಾಣುತ್ತಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ವೇದವ್ಯಾಸ್ ಆಗ್ರಹಿಸಿದ್ದಾರೆಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!