dtvkannada

ಮಂಗಳೂರು: ಕೆಲ ದಿನಗಳಿಂದ ಆಝಾನ್ ಮತ್ತು ಭಜನೆಯ ನಡುವೆ ನಡೆಯುತ್ತಿರುವ ವಿವಾದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ದ.ಕ ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷರು ಈ ದೇಶವು ಆಧ್ಯಾತ್ಮಿಕ ನೆಲೆಗಟ್ಟು ಮತ್ತು ನಂಬಿಕೆಯಿಂದ ನಿಂತಿದೆ.ಭಾರತದ ಮುಸ್ಲಿಮರು ದೇವಾರಧಕರು ಮತ್ತು ಅಷ್ಟೇ ದೃಢವಾಗಿ ದೇಶ ಪ್ರೇಮಿಗಳು. ಮುಸ್ಲಿಮರಿಗೆ ಭಾರತದಲ್ಲಿ ಧರ್ಮವಿಲ್ಲದೆ ದೇಶವಿಲ್ಲ.

ಪ್ರತೀ ಮುಸ್ಲಿಮನ ಆರಾಧನೆಯು ಅಲ್ಲಾಹನಿಗೆ ಅರ್ಪಿತ. ಅಲ್ಲಾಹನ ಪ್ರಾರ್ಥನೆಗೆ ಇರುವ ಕರೆ ಆಝಾನ್ ಎಂಬುದು ನಿಸರ್ಗ ನಿಯಮ, ಈ ಕರೆಯನ್ನು ಹಿಂದೆಂದಿಗಿಂತಲೂ ಸಮರ್ಪಕವಾಗಿ, ಸ್ಪಷ್ಟವಾಗಿ ಮತ್ತು ಸುಂದರವಾಗಿ ಕರೆಯಲಾಗುವುದು.

ದೇವ ಪ್ರಣಾಮದ ಕರೆಯನ್ನು ಸೀಮಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವದಿಲ್ಲ. ಅಲ್ಲಾಹನಿಗೆ ಪ್ರಾರ್ಥನೆಯ ಆಮಂತ್ರಣ ಕರೆ ಆಝಾನ್‌ನ್ನು ಈ ಹಿಂದಿನಂತೆಯೇ ಕರೆಯುತ್ತೇವೆ. ಈ ನಿರ್ಧಿಷ್ಟ ಕರೆಯನ್ನು ಈ ಹಿಂದೆ, ತಡೆಯಲು ಅದೆಷ್ಟೋ ಕಿಂಕರರು ಪ್ರಯತ್ನಿಸಿದರೂ ನಿಸರ್ಗ ಮತ್ತು ಈ ಜಗದ ಸುವ್ಯ ವಸ್ತೆ ಅಂತವರಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಅದೇ ಸಂಭವಿಸುವುದು.

ನಮಾಝ್‌ಗಿರುವ ಆಝಾನ್ ಕರೆ ತಡೆಯಲು ಈ ಹಿಂದೆ ಪ್ರಯತ್ನಿಸಿದ ಮುತಾಲಿಕನ ಪೂರ್ವಜರಿಗೆ ಏನು ಶಾಸ್ತಿ ಆಗಿದೆಯೋ ಅದೇ ಮುತಾಲಿಕನ ಪ್ರಯತ್ನದಲ್ಲಿ ಸಂಭವಿಸಲಿದೆ. ದೇವ ಪ್ರಾರ್ಥನೆಯ ಕರೆಯನ್ನು ಪ್ರಶ್ನಿಸುವ ಮುತಾಲಿಕನ ಸಂತತಿಯವರು ಈ ಬಗ್ಗೆ ನಿಗಾ ಹೊಂದುವುದು ಒಳಿತು.

ಶಬ್ದ ಮಾಲಿನ್ಯ ಮತ್ತು ಶ್ರವಣ ಮಾಲಿನ್ಯದ ವ್ಯತ್ಯಾಸವನ್ನು ಅರಿಯುವುದು ಒಳಿತು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!