dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಕಳೆದ 37 ವರ್ಷಗಳಿಂದ ಪುತ್ತೂರಿನ ಮುರದಲ್ಲಿ ಕಾರ್ಯಚರಿಸುತ್ತಿದ್ದ ‘ಖಲಂದರಿಯ ರೆಸ್ಟೋರೆಂಟ್” ಸ್ಥಳಾಂತರಗೊಂಡು ಪುತ್ತೂರು ಬೊಳ್ವಾರಿನ ಇನ್ ಲ್ಯಾಂಡ್ ಮಯೂರದ ಮೊದಲನೇ ಮಹಡಿಯಲ್ಲಿ ಇಂದು ಶುಭಾರಂಭಗೊಂಡಿತು.

ಧರ್ಮಗುರು ಅಸಯ್ಯದ್ ಫಝಲ್ ಕೋಯಮ್ಮ ತಂಞಳ್ ಕೂರತ್ ದುಃಆಶೀರ್ವಚನ ಮಾಡುವ ಮೂಲಕ ಉದ್ಘಾಟನೆಗೈದು ಶುಭಹಾರೈಸಿದರು. ಶುಚಿ-ರುಚಿಯಾದ ಆಹಾರವನ್ನು ಒದಗಿಸುತ್ತಾ ಬಂದಿರುವ ಖಲಂದರಿಯಾ ರೆಸ್ಟೊರೆಂಟ್ ಇದೀಗ ಸ್ಥಳಾಂತರಗೊಂಡು ನವೀಕರಣದೊಂದಿಗೆ ಶುಭಾರಂಭಗೊಂಡಿದ್ದು, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಖಾದ್ಯಗಳು ಸೇರಿ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆಯ ಉಪಹಾರಗಳು ಮಿತದರದಲ್ಲಿ ಇಲ್ಲಿ ಲಭ್ಯವಾಗಲಿದೆ.

'; } else { echo "Sorry! You are Blocked from seeing the Ads"; } ?>

ಜಿಲ್ಲಾ ಕೇಂದ್ರವಾಗುವ ನಿರೀಕ್ಷೆಯಲ್ಲಿರುವ ಪುತ್ತೂರಿನಲ್ಲಿ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದ, ಕರಾವಳಿಯ ವೆರೈಟಿ ಖಾದ್ಯಗಳನ್ನೊಳಗೊಂಡ ಖಲಂದರಿಯಾ ರೆಸ್ಟೊರೆಂಟ್, ಪುತ್ತೂರು ಭಾಗದ ಜನತೆಗೂ ಬೇರೆ ಪ್ರದೇಶದಿಂದ ಬರುವ ಪ್ರವಾಸಿಗರಿಗೂ ಒಳ್ಳೆಯ ಖಾದ್ಯವನ್ನು ಉಣಬಡಿಸಲು ತಯಾರಾಗಿದೆ.

ಕಳೆದ 37 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿ ಯಶಸ್ಸು ಕಂಡಿರುವ ಮಾಲಿಕರಾದ ಅಬ್ದುಲ್ ರಹಿಮಾನ್, ಇದೀಗ ತಮ್ಮ ಹೊಟೇಲ್ ಉದ್ಯಮವನ್ನು ಪುತ್ತೂರು ಸಮೀಪದ ಬೊಳ್ವಾರ್’ಗೆ ಸ್ಥಳಾಂತರಿಸಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರ ತನಕ ಕರಾವಳಿ ಶೈಲಿಯ ಬಗೆಬಗೆಯ ಖಾದ್ಯಗಳೊಂದಿಗೆ ಗ್ರಾಹಕರ ಸೇವೆಗೆ ಸಿದ್ದವಾಗಿ ನಿಂತಿದೆ.

'; } else { echo "Sorry! You are Blocked from seeing the Ads"; } ?>

ವಿನೂತನ ರೆಸ್ಟೋರೆಂಟ್ ಮಾಳಿಗೆಗೆ ಅತಿಥಿಗಳಾಗಿ ಸಿವಿಲ್ ಇಂಜಿನಿಯರ್ ಸನದ್ ಯೂಸುಫ್ ಪುತ್ತೂರು, ಇನ್ನೋರ್ವ ಸಿವಿಲ್ ಇಂಜಿನಿಯರ್ ನೌಫಲ್ ನೆಕ್ಕಿಲಾಡಿ, ಶಮೀಮ್ ಮೊಹಮ್ಮದ್, ಉದ್ಯಮಿ ದಾವೂದ್ ತಾಜ್ ಸಂಪ್ಯ, ಇಫಾಝ್ ಬನ್ನೂರು ಸಹಿತ ಹಲವರು ಭೇಟಿ ನೀಡಿ ಶುಭ ಹಾರೈಸಿದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!