';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೊಚ್ಚಿ : ನಟಿ, ರೂಪದರ್ಶಿಯಾಗಿದ್ದ ಮಂಗಳಮುಖಿ ಶೆರಿನ್ ಸೆಲಿನ್ ಮ್ಯಾಥ್ಯ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕೊಚ್ಚಿಯ ಚಕ್ಕರಪರಂಬುವಿನ ತಮ್ಮ ನಿವಾಸದಲ್ಲಿ ಪತ್ತೆಯಾಗಿದೆ.
ಅಪಾರ್ಟೆಮೆಂಟ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಶೆರಿನ್(26) ಮೃತಪಟ್ಟಿದ್ದಾರೆ.ಆಳಪ್ಪುಝ ಜಿಲ್ಲೆ ಮೂಲದ ಶೆರಿನ್ ಕಳೆದ ಹಲವು ವರ್ಷಗಳಿಂದ ಕೊಚ್ಚಿಯಲ್ಲಿ ನೆಲೆಸಿದ್ದರು.
ಪ್ರಾಥಮಿಕ ತನಿಖೆ ಬಳಿಕ ಮಾನಸಿಕ ಒತ್ತಡ ಎದುರಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇವರು ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಮೊದಲಿಗೆ ನೋಡಿದ ಆಕೆಯ ರೂಂಮೇಟ್ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ಈ ಕುರಿತಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಚಕ್ಕರಪರಂಬು ಪೊಲೀಸರು ತನಿಖೆ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.