dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ಶಾಲಾ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಬಾಲಕಿಯರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಬಾಲಕಿಯರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಗೆ ಸೇರಿದವರು ಎಂದು ಹೇಳಲಾಗುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ನಡೆದ ಕಿರಿಕ್ ವಿಷಯಕ್ಕೆ ಸಂಬಂಧಿಸಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

'; } else { echo "Sorry! You are Blocked from seeing the Ads"; } ?>

ವೈರಲ್ ಆಗಿರುವ ವೀಡಿಯೊದಲ್ಲಿ ಬಾಲಕಿಯರು ಪರಸ್ಪರ ಹೊಡೆದಾಡುವ ದೃಶ್ಯಗಳು ಕಾಣುತ್ತಿವೆ. ಒಬ್ಬ ಹುಡುಗಿಯು ಕೋಲು ಹಿಡಿದು ಮತ್ತೊಬ್ಬರನ್ನು ಹೊಡೆಯಲು ನುಗ್ಗಿ ಹೋದಾಗ ಒಂದಿಷ್ಟು ಹುಡುಗರು ಆಕೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಾರೆ. ಹೊಡೆದಾಟ ಕೆಲ ಸಮಯ ಮುಂದುವರಿದ ನಂತರ ಒಂದಿಷ್ಟು ಜನರು ಉದ್ರಿಕ್ತ ಬಾಲಕಿಯರನ್ನು ಸಮಾಧಾನಪಡಿಸಲು ಯತ್ನಿಸುತ್ತಾರೆ.

ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯು ಈವರೆಗೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಟ್ವಿಟರ್ನಲ್ಲಿ ಮಾತ್ರ ಪ್ರತ್ಯಕ್ಷದರ್ಶಿಗಳು ಎನ್ನುವವರ ಮೆಸೇಜ್ಗಳು ತುಂಬಿತುಳುಕುತ್ತಿವೆ. ವೈರಲ್ ಆಗಿರುವ ಸ್ಕ್ರೀನ್ಶಾಟ್ ಒಂದರ ಪ್ರಕಾರ, ರಚನಾ ಎನ್ನುವ ಹುಡುಗಿ ತನ್ನನ್ನು ಬಿಷಪ್ಕಾಟನ್ ಶಾಲೆಗೆ ಬಂದು, ಯಾರಿಗೋ ಹೊಡೆಯಲು ಹೇಳಿದ್ದಳು ಎಂಬ ಒಕ್ಕಣೆ ಇದೆ.

'; } else { echo "Sorry! You are Blocked from seeing the Ads"; } ?>
ವೀಡಿಯೋ ನೋಡಿ

ಬಾಲಕಿಯರ ಹೊಡೆದಾಟದ ವಿಡಿಯೊ ಹಂಚಿಕೊಳ್ಳುವ ಬಗ್ಗೆಯೂ ಸಂವೇದನಾಶೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಂಜುಳಾ ವೀರಪ್ಪ, ‘ಇದು ಅವಮಾನಕರ ಘಟನೆ. ಈ ಬಗ್ಗೆ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಶಾಲೆಯ ಆಡಳಿತ ಮಂಡಳಿಯು ಶಿಸ್ತುಕ್ರಮಕ್ಕೆ ಮುಂದಾಗಿದೆ. ಈ ಘಟನೆಯನ್ನು ಅವರ ವಿವೇಚನೆಗೆ ಬಿಡೋಣ’ ಎಂದು ಹೇಳಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!