ಉಪ್ಪಿನಂಗಡಿ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಂಡಿಯನ್ ಸ್ಕೂಲ್ ಉಪ್ಪಿನಂಗಡಿಯ ವಿದ್ಯಾರ್ಥಿನಿ ಆಯಿಷತ್ ಸೌಶಾನ 608 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ಪ್ರಥಮ ಭಾಷೆ ಕನ್ನಡದಲ್ಲಿ 121, ಇಂಗ್ಲೀಷ್ 98, ಹಿಂದಿ 100, ಗಣಿತ 98, ವಿಜ್ಞಾನ 94 ಹಾಗೂ ಸಮಾಜದಲ್ಲಿ 97 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಇವಳು ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಪೆರಾಬೆ ನಿವಾಸಿ ಉಮರ್ ಹಾಗೂ ಅಸ್ಮಾ ದಂಪತಿಯ ಪುತ್ರಿಯಾಗಿರುತ್ತಾಳೆ.