dtvkannada

'; } else { echo "Sorry! You are Blocked from seeing the Ads"; } ?>

ತುಮಕೂರು: ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿದೆ. ಕೇವಲ ಮುಸ್ಲಿಮರು ಅಷ್ಟೇ ಗೋಮಾಂಸವನ್ನು ತಿನ್ನುವುದಿಲ್ಲ, ಹಿಂದೂಗಳು ಸಹ ಗೋಮಾಂಸ ತಿನ್ನುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತರ ಬೃಹತ್ ಸಮಾವೇಶ (Convention)ದಲ್ಲಿ ಮಾತನಾಡಿದ ಅವರು, ಗೋಮಾಂಸ (Beef) ತಿನ್ನುವ ಬಗ್ಗೆ ಸದನದಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ. ಹಾಗಾದ್ರೆ ನೀನು ಗೋಮಾಂಸ ತಿಂತಿಯಾ ಅಂತ ಪ್ರಶ್ನಿಸಿದ್ದರು. ಈವರೆಗೂ ತಿಂದಿಲ್ಲ, ತಿನ್ನಬೇಕು ಎನ್ನಿಸಿದರೆ ತಿನ್ನುವೆ. ನೀನು ಯಾರು ಕೇಳೋಕೆ ಅಂತ ಉತ್ತರ ಕೊಟ್ಟೆ ಎಂದು ಹೇಳಿದರು.

ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಕೆಲ ಧರ್ಮಗಳಲ್ಲಿ ಅವರದ್ದೇ ಆದ ಆಚಾರ-ವಿಚಾರ ಇರುತ್ತದೆ. ನಮ್ಮ ಧರ್ಮದ ಬಗ್ಗೆ ನಿಷ್ಠೆ ಮತ್ತು ಪರ ಧರ್ಮವನ್ನು ಗೌರವಿಸಬೇಕು. ಯಾವುದನ್ನೂ ಭೇದ ಭಾವ ಮಾಡಬಾರದು. ಯಾರೂ ಸಹ ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳಬಾರದು. ಸಮಾಜ ಒಡೆಯುವ ಕೆಲಸ RSS ಮಾಡುತ್ತಿದೆ. ಇಂಥವರಿಗೆ ಅಧಿಕಾರ ಸಿಕ್ಕರೆ ಸಂವಿಧಾನವನ್ನೇ ತೆಗೆಯುತ್ತಾರೆ. ಬಿಜೆಪಿ ಸಂವಿಧಾನವನ್ನ ಒಡೆಯುವ ಕೆಲಸ ಮಾಡುತ್ತಿದೆ ಎಂದರು.

'; } else { echo "Sorry! You are Blocked from seeing the Ads"; } ?>

ಯಾರು ಯಾವುದೇ ಧರ್ಮಕ್ಕೆ ಸೇರಿದರೂ ಮೊದಲು ನಾವೆಲ್ಲಾ ಭಾರತೀಯರು. ನಮ್ಮ ಭಾರತೀಯ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಯಿದೆ. ಜಾತಿ-ಧರ್ಮದ ವ್ಯವಸ್ಥೆಯಲ್ಲಿ ಹುಟ್ಟಿದ್ದೇವೆ. ನಾವೆಲ್ಲೆರು ಮೊದಲು ಮನುಷ್ಯರಾಗಿ ಬದುಕಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಈ ದೇಶ ಒಂದು ಧರ್ಮದವರ ದೇಶ ಅಲ್ಲ. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ ಒಂದು ದೇಶದ ಧರ್ಮ ಎಂದು ಬರೆದಿಲ್ಲ. ಎಲ್ಲರೂ ತಮಗೆ ನಿಷ್ಠೆ ಇರುವಂತಹ ಧರ್ಮ ಆಚರಣೆಗೆ ಅವಕಾಶ ಇದೆ. ಧರ್ಮದಲ್ಲಿ ನಿಷ್ಠೆ ಇದ್ದು ಪರ ಧರ್ಮವನ್ನು ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ಅಸೂಯೆ ಪಟ್ಟರೆ ನಾವು ಮನುಷ್ಯರಲ್ಲ. ಸರ್ವಜನಾಂಗದ ಶಾಂತಿಯ ತೋಟ ಅನ್ನೋದು ಬರೀ ಹೇಳೋಕೆ ಮಾತ್ರನಾ? ಸಂವಿಧಾನದ ಆಶಯದಂತೆ ನಡೆಯಬೇಕು ಎಂದರು.

'; } else { echo "Sorry! You are Blocked from seeing the Ads"; } ?>

ಹಿಂದೂ ಸಮುದಾಯದಲ್ಲಿ ಅಸಮಾನತೆ ಇದ್ದುದರಿಂದ ಅಂಬೇಡ್ಕರ್ ಮತಾಂತರ ಆದರು. ಜೆಡಿಎಸ್​ನವರು ಜಾತ್ಯಾತೀತರು ಅಂತಾರೆ. ಮತಾಂತರ ಮತ್ತು ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧ ಮಾಡಿಲ್ಲ. ಅವರು ಜ್ಯಾತ್ಯಾತೀತರಾ? ಟಿಪ್ಪು ಸುಲ್ತಾನ್ ಜಯಂತಿ ಸಿದ್ದರಾಮಯ್ಯ ವೋಟ್​ಗಾಗಿ ಮಾಡ್ಬಿಟ್ಟಾ ಅಂತಾರೆ. ಟಿಪ್ಪು ಸುಲ್ತಾನ್ ಮತಾಂಧ ಅಲ್ಲ. ಟಿಪ್ಪು ಒಬ್ಬ ಮಹಾನ್‌ ದೇಶಭಕ್ತ. ಇವತ್ತು ಬಿಜೆಪಿ ಸರ್ಕಾರ ಹಿಜಾಬ್, ಹಲಾಲ್, ಆಜಾನ್‌ ವಿಚಾರ ಎತ್ತುತಿದ್ದಾರೆ. ಅವರ ಹುಳುಕುಗಳನ್ನು ಮುಚ್ಚಲು ಇದನ್ನು ಎತ್ತುತಿದ್ದಾರೆ ಎಂದರು.

ಯಾವತ್ತುಗೋವಿನ ಸಗಣಿ ಎತ್ತದವನು ಇವತ್ತು ಗೋ ರಕ್ಷಣೆ ಬಗ್ಗೆ ಮಾತನಾಡುತ್ತಾನೆ. ಅಂತಹ ಸ್ಥಿತಿಗೆ ನಮ್ಮ ರಾಜ್ಯ ತಲುಪಿದೆ. ಆರ್ಎಸ್ಎಸ್ ಸಂಸ್ಥಾಪಕ ಬಲಿರಾಮ್ ಹೆಡ್ಗೆವಾರ್ ಮಾತ್ರ ಹಿಂದೂನಾ?, ಬಸವರಾಜ್ ಬೊಮ್ಮಾಯಿ ಮಾತ್ರ ಹಿಂದೂನಾ? ನನ್ನ ಅಪ್ಪ ಹಿಂದೂ, ನಾನು ಕೂಡ ಹಿಂದೂನೇ. ನಾನು ಎಲ್ಲಾ ಧರ್ಮವನ್ನ ಪ್ರೀತಿ ಮಾಡಲ್ವಾ ಎಂದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!