ಪುತ್ತೂರು : 22/5/22 ನೇ ಆದಿತ್ಯವಾರ ಸಂಜೆ 5 ಗಂಟೆಗೆ ಕೆಮ್ಮಾಯಿ SჄS ಕಛೇರಿಯಲ್ಲಿ ಕೆಮ್ಮಾಯಿ ಜಮಾಅತಿಗೆ ಒಳಪಟ್ಟ SSLC ಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು.
ಬಳ್ಳಾರಿ ರಫೀಕ್ ಸಖಾಫಿ ಮಾತನಾಡಿ ನೀವು ಉತ್ತಮ ಹಾಗೂ ದೊಡ್ಡ ಕನಸನ್ನು ಕಾಣಿರಿ ಹಾಗೂ ಅವುಗಳನ್ನು ಪರಿಪೋಶಿಸಿ ಬೆಳೆಸಿರಿ ಮತ್ತು ಕನಸನ್ನು ಕದಿಯಲು ಅವಕಾಶ ನೀಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೆಮ್ಮಾಯಿ ಜಮಾಅತ್ ಕಮಿಟಿಯ ಅಧ್ಯಕ್ಷ ರಾದ ಅಬ್ದುಲ್ ಬಶೀರ್ ಹಾಜಿಯವರು ಮಾತನಾಡಿ ಕೆಮ್ಮಾಯಿಯ ವಿದ್ಯಾರ್ಥಿಗಳು SSLC ಯಲ್ಲಿ ಉತ್ತಮ ಸಾಧನೆ ಗೈದ ದ್ದು ಸ್ವಾಗತಾರ್ಹ ಇದನ್ನು ಇನ್ನೂ ಮುಂದುವರೆಸಿಕೊಂಡು ಹೋಗುವಂತೆ ನುಡಿದರು.
SჄS ಕೆಮ್ಮಾಯಿ ಅಧ್ಯಕ್ಷ ರಾದ ಅಬ್ದುಲ್ ರಹೀಂ ಕೆಮ್ಮಾಯಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ಕ್ಕಾಗಿ ಗುರಿ ತಲುಪುವವರೆಗೂ ನಿರಂತರ ಕಠಿಣ ಪರಿಶ್ರಮ ಗೈಯಬೇಕೆಂದು ನುಡಿದರು.
ಸಮಾರಂಭ ದಲ್ಲಿ 2021 2022 ನೇ ಸಾಲಿನ SSLCಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಾದ ಸಫಾ ಮರ್ಯಂ (607), ದೀನಾ ಮೈಮೂನ (558) , ಶಿಯಾ (551)
ಆಯಿಷತ್ ಸಫ್ರೀನ,ಝೀನತ್ ನಿಹಾ, ಮುಹಮ್ಮದ್ ಅನೀಶ್,ಖಿಲ್ರ್, ಮುಹಮ್ಮದ್ ಆರಿಫ್, DK ನಬೀಲ್, ಮುಹಮ್ಮದ್ ಅಲ್ತಾಫ್, ಶಹೀರ್ ಮುಂತಾದ 11 ವಿದ್ಯಾರ್ಥಿಗಳನ್ನು SჄS ಕೆಮ್ಮಾಯಿ ವತಿಯಿಂದ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕೆಮ್ಮಾಯಿ ಜಮಾಅತ್ ಉಪಾಧ್ಯಕ್ಷ ರಾದ ಹಸನ್ ಹಾಜಿ ಗಾರ್ಬಲ್, ಕಾರ್ಯದರ್ಶಿ ಯಾದ ಅಬ್ದುಲ್ ರಹಿಮಾನ್ ಹಾಜಿ, ಸಂಶುದ್ದೀನ್ ಗಾರ್ಬಲ್, ಆಸಿಫ್ ಕೆಮ್ಮಾಯಿ, ಅಝೀಝ್ ಕೆಮ್ಮಾಯಿ, ನೌಫಲ್ ಕೆಮ್ಮಾಯಿ, ಉಸ್ಮಾನ್ ಬೀರ್ನ ಹಿತ್ಲು, ಮುಹಮ್ಮದ್ ಅಫ್ರೀಝ್, ಮುಂತಾದವರು ಹಾಜರಿದ್ದರು.
SჄS ಕೆಮ್ಮಾಯಿ ಕಾರ್ಯದರ್ಶಿ ಯಾದ ಅಬ್ದುಲ್ ಅಝೀಝ್ ಸ್ವಾಗತಿಸಿ, ರಫೀಕ್ ಕೆಮ್ಮಾಯಿ ವಂದಿಸಿದರು.