ಮಂಗಳೂರು, ಜೂನ್ 05: ಹ್ಯಾಂಡ್ ಟು ಹ್ಯಾಂಡ್ ಫೌಂಡೇಶನ್ ಬಜಾಲ್ ಇದರ ಉದ್ಘಾಟನೆಯ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ರಕ್ತನಿಧಿಯ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 05 ಜೂನ್ 2022 ನೇ ಆದಿತ್ಯವಾರದಂದು ಬಜಾಲ್ ನಂತೂರ್ ನ ಅಲ್ ಸಫಾ ಮೈದಾನದ ಬಿ.ಅಬ್ಬಾಸ್ ವೇದಿಕೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ನಿಸಾರ್ ಉಳ್ಳಾಲರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಯೆನೆಪೋಯ ಆಸ್ಪತ್ರೆ ರಕ್ತನಿಧಿಯ ಅಧಿಕಾರಿ ಡಾ| ಗ್ಲೋರಿಯಾರವರು ಉದ್ಘಾಟಿಸಿದರು.
ಬಜಾಲ್ ಜುಮಾ ಮಸೀದಿಯ ಖತೀಬರಾದ ಬಹು| ಮುಹಮ್ಮದ್ ಅಲ್ ಖಾಮಿಲ್ ಸಖಾಫಿಯವರು ದುಃವಾಶೀರ್ವಚನ ನೀಡಿದ ನಂತರ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 26 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೆನೆಪೋಯ ಆಸ್ಪತ್ರೆ ರಕ್ತನಿಧಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಹ್ಯಾಂಡ್ ಟು ಹ್ಯಾಂಡ್ ಫೌಂಡೇಶನ್ ಲೋಕಾರ್ಪಣೆ ಪ್ರಯುಕ್ತ 8 ಅಂಗನವಾಡಿಯ ಮಕ್ಕಳಿಗೆ ಇ-ಸ್ಲೇಟ್ ವಿತರಣೆ ಹಾಗೂ ಪರಿಸರ ದಿನದ ಅಂಗವಾಗಿ ಗಿಡಗಳ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ| ಇಮ್ರಾನ್ ಪಾಷಾ, ಬಜಾಲ್ ವಾರ್ಡ್ ಕಾರ್ಪೊರೇಟರ್ ಕೆ.ಇ ಅಶ್ರಫ್ ಬಜಾಲ್, ರವೂಫ್ ಬಜಾಲ್ ಹಾಗೂ ಬ್ಲಡ್ ಹೆಲ್ಪ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರಾದ ಅಶ್ರಫ್ ಕಲ್ಕಟ್ಟರವರು ಉಪಸ್ಥಿತರಿದ್ದರು.
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಬಜಾಲ್ ಪರಿಸರದ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದರು.