dtvkannada

'; } else { echo "Sorry! You are Blocked from seeing the Ads"; } ?>

ಪಾಟ್ನಾ : ಚಲಿಸುತ್ತಿದ್ದ ಬಸ್ಸಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹೃದಯ ವಿದ್ರಾವಕ ಘಟನೆ ಬಿಹಾರದಲ್ಲಿ ನಡೆದಿದೆ. ಮಂಗಳವಾರ ಘಟನೆ ನಡೆಡಿದ್ದು, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

“ಬಾಲಕಿಯು ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾ ಎಂಬಲ್ಲಿಗೆ ತೆರಳಲು ಬಸ್‌ಗಾಗಿ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಬಸ್ ಚಾಲಕನು ಬೆಟ್ಟಿಯಾಗೆ ಹೋಗುವುದಾಗಿ ಹೇಳಿದ್ದು, ಅವಳು ಬಸ್ ಹತ್ತಿದ ಮೇಲೆ ಮತ್ತು ಬಾರಿಸುವ ಔಷಧಿ ಕುಡಿಸಿ ಕೃತ್ಯ ಎಸಗಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಬೆಟ್ಟಿಯಾ-ಸದರ್ ) ಮುಕುಲ್ ಪಾಂಡೆ ಹೇಳಿದ್ದಾರೆ.

'; } else { echo "Sorry! You are Blocked from seeing the Ads"; } ?>

ಘಟನೆ ನಡೆದ ಬಳಿಕ ಯುವತಿಯನ್ನು ಬಸ್ ನೊಳಗೆ ಲಾಕ್ ಮಾಡಿ ಕಾಮುಕರು ಪರಾರಿಯಾಗಿದ್ದರು. ಆಕೆಗೆ ಪ್ರಜ್ಞೆ ಬಂದು ಕೂಗಿಕೊಂಡಾಗ ಸ್ಥಳೀಯರು ಬಾಗಿಲು ತೆರೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೃತ್ಯದಲ್ಲಿ ಭಾಗಿಯಾಗಿದ್ದ ಬಸ್ ಚಾಲಕ, ಕಂಡಕ್ಟರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ವರದಿ ಮತ್ತು ಆರೋಪಿಗಳ ವಿಚಾರಣೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!