dtvkannada

ಚಲಿಸುತ್ತಿರುವ ಬಸ್ಗಳಿಗೆ ಹತ್ತಬೇಡಿ ಎಂಬ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಈ ಸೂಚನೆ ರೈಲು ಸೇರಿದಂತೆ ಎಲ್ಲಾ ವಾಹನಗಳಿಗೂ ಅನ್ವಯಿಸುತ್ತದೆ. ರೈಲ್ವೇ ನಿಲ್ದಾಣಗಳಲ್ಲಿ ಪೊಲೀಸರು ಪ್ರಯಾಣಿಕರನ್ನು ಗಮನಿಸುತ್ತಿರುತ್ತಾರೆ. ಚಲಿಸುತ್ತಿದ್ದ ರೈಲಿಗೆ ಹತ್ತಲು ಪೊಲೀಸರು ಬಿಡುವುದಿಲ್ಲ. ಹೀಗಿದ್ದಾಗಲೂ ಕೆಲವೊಮ್ಮೆ ಪ್ರಯಾಣಿಕರು ಹತ್ತಲು ಹೋಗಿ ಎಡವಿಬಿದ್ದ ಆಪತ್ತಿಗೆ ಸಿಲುಕುತ್ತಾರೆ.

ಅಂಥಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶುಕ್ರವಾರ ಚೆನ್ನೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಕಾಲು ಜಾರಿ ಬಿದ್ದ 22 ವರ್ಷದ ಯುವಕನ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನ ಅಲರ್ಟ್ ಕಾನ್‌ಸ್ಟೆಬಲ್ ರಕ್ಷಿಸಿದ್ದಾರೆ.

ಚೆನ್ನೈ ಸೆಂಟ್ರಲ್ ಸ್ಟೇಷನ್‌ನಲ್ಲಿ ಪ್ಲಾಟ್‌ಫಾರ್ಮ್ ಮತ್ತು ಟ್ರ್ಯಾಕ್ ನಡುವಿನ ಅಂತರದಲ್ಲಿ ಬಿದ್ದ ಪ್ರಯಾಣಿಕರನ್ನು ರಕ್ಷಿಸಿದವರನ್ನು ಚೆನ್ನೈ ವಿಭಾಗದ ಆರ್‌ಪಿಎಫ್ ಕಾನ್ಸ್‌ಟೇಬಲ್ ಶ್ರೀ ರಾಮ್ ಕಿಸಾನ್ ಮೀನಾ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ರಾಮ್ ಕಿಸಾನ್ ಮೀನಾ, ಪ್ಲಾಟ್‌ಫಾರ್ಮ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ರೈಲಿನಿಂದ ಬೀಳುವ ಪ್ರಯಾಣಿಕರನ್ನು ಗಮನಿಸಿದೆ. ಒಂದು ಕ್ಷಣವೂ ವ್ಯರ್ಥ ಮಾಡದೆ ನಾನು ಧಾವಿಸಿ ಅವರನ್ನು ಎಳೆದಿದ್ದೇನೆ. ನಾನು ಸರಿಯಾದ ಸಮಯಕ್ಕೆ ಅಲ್ಲಿದ್ದೆ. ಪ್ರಯಾಣಿಕರಿಗೆ ಸಹಾಯ ಮಾಡಲು ಯಾರೂ ಇಲ್ಲದಿದ್ದರೆ ಅದು ಅನಾಹುತವಾಗುತ್ತಿತ್ತು. ಘಟನೆಯಲ್ಲಿ ಅವರು ಗಾಯಗೊಂಡಿಲ್ಲ. ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೆ. ಪ್ರಯಾಣಿಕನನ್ನು ಉಳಿಸಲು ನನಗೆ ಮೊದಲ ಬಾರಿಗೆ ಅವಕಾಶ ಸಿಕ್ಕಿತು” ಎಂದು ಹೇಳಿದ್ದಾಗಿ TOI ಉಲ್ಲೇಖಿಸಿದೆ.

By dtv

Leave a Reply

Your email address will not be published. Required fields are marked *

error: Content is protected !!