ಮೂಡಬಿದ್ರೆ: ಮನುಷ್ಯನ ಕಿಡ್ನಿ ಯನ್ನು ಶಸ್ತ್ರಚಿಕಿತ್ಸೆಯಿಂದ ಬದಲಿಸಬಹುದು, ಹೃದಯವನ್ನೂ ಬದಲಾಯಿಸಬಹುದು ಆದರೆ ಹ್ರದಯಕ್ಕೆ ಹಿಡಿದ ತುಕ್ಕನ್ನು ಬದಲಾಯಿಸಲು ಯಾವ ಶಸ್ತ್ರಚಿಕಿತ್ಸೆ ಯಿಂದಲೂ ಸಾದ್ಯವಿಲ್ಲ ಎಂದು ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆಯ ವೈದ್ಯರಾದ ಹರೀಶ್ ನಾಯಕ್ ಅಭಿಪ್ರಾಯ ಪಟ್ಟರು.

ಅವರು ಇಂದು ರೋಟರಿ ಕ್ಲಬ್ ಮೂಡಬಿದ್ರೆ ಟೆಂಪಲ್ ಟೌನ್, ಆಲ್ ಇಂಡಿಯ ಮೊಬೈಲ್ ರಿಟೈಲರ್ ಅಸೋಸಿಯೇಷನ್, ಲಯನ್ಸ್ ಕ್ಲಬ್ ಅಲಂಗಾರು, ಜೈನ್ ಮೆಡಿಕಲ್ ಸೆಂಟರ್ ಮೂಡಬಿದ್ರೆಇವರು ಆಯೋಜಿಸಿದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇವರಸಹಯೋಗದಲ್ಲಿ ಸಂಸ್ಥೆಯ 138ನೇ ಸ್ವಯಂ ಪ್ರೇರಿತ ಸೌಹಾರ್ದ ಸಾರ್ವಜನಿಕ ರಕ್ತದಾನ ಶಿಬಿರವನ್ನು ಎ.ಜೆ ರಕ್ತನಿಧಿ ಮಂಗಳೂರು ಇವರ ಸಹಕಾರದಲ್ಲಿ 17-06-2022 ಮೂಡಬಿದಿರೆ ರೋಟರಿ ಶಾಲೆಯ ಪಕ್ಕದ ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಆಯೋಜಿಸಿದ ಸ್ವಯಂ ಪ್ರೇರಿತ ಸೌಹಾರ್ದ ಸಾರ್ವಜನಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್ ಮಾತಾಡಿ ಪ್ರತಿಯೊಬ್ಬರಬಯಕೆ,ಆಗ್ರಹ,ಮನಸ್ಸು,ಸೇವೆಮಾಡುವ, ದಾನಮಾಡುವ,ಪರೋಪಕಾರಿ ಚಿಂತನೆಯ ತುಡಿತ ಇರಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಆಲ್ ಇಂಡಿಯಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಇದರ ಮುಖ್ಯಸ್ಥರಾದ ರೂಪೇಶ್,ಜೈನ್ ಮೆಡಿಕಲ್ ಸೆಂಟರ್ ಇದರ ಮಾಲಕರಾದ ಮಹಾವೀರ್ ಜೈನ್,ಲಯನ್ಸ್ ಕ್ಲಬ್ ಅದ್ಯಕ್ಷರಾದ ವಿನೋದ್ ನಝ್ರತ್,ಎ ಜೆ ಆಸ್ಪತ್ರೆ ವೈದ್ಯರಾದ ರೇಷ್ಮಾ, ಪ್ರವಣ್ಯ ಜೈನ್,ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯಕಾರ್ಯನಿರ್ವಾಹಕರಾದ ಇಂತಿಯಾಝ್ ಬಜಪೆ,ಅಬ್ದುಲ್ ಹಮೀದ್ ಗೋಳ್ತಮಜಲ್, ಝಾಕೀರ್ ಇಕ್ಲಾಸ್,ದಿಲ್ಶಾನ್ ಉಪಸ್ಥಿತರಿದ್ದರು, ರೋಟರಿ ಕ್ಲಬ್ ಮೂಡುಬಿದಿರೆ ಇದರ ಅದ್ಯಕ್ಷ ರಾದ ರಮೇಶ್ ಕುಮಾರ್ ಸ್ವಾಗತಿಸಿದರು. ನಿಯೋಜಿತ ರೋಟರಿ ಕ್ಲಬ್ ಅದ್ಯಕ್ಷರಾದ ಪ್ರವೀಣ್ ವಂದಿಸಿದರು,ರೋಟರಿ ಕ್ಲಬ್ ಸದಸ್ಯ ರಾದ ಮುಸ್ತಫಾ ಕಾರ್ಯಕ್ರಮ ನೀರೂಪಿಸಿದರು