';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: ಮಾವು ಕೀಳಲೆಂದು ಮಾವಿನ ಮರಕ್ಕೆ ಹತ್ತಿದ ಯುವಕನಿಗೆ ಸಮೀಪದಲ್ಲೇ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಮರಣ ಹೊಂದಿದ ಘಟನೆ ಇದೀಗ ಉಳ್ಳಾಲದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಉಳ್ಳಾಲದ ಜಲಾಲ್ ಬಾಗ್ ನಿವಾಸಿ ಇಲ್ಯಾಸ್(28) ಗುರುತಿಸಲಾಗಿದೆ.
ಮಾವು ಕೀಳಲೆಂದು ಮರಕ್ಕೆ ಹತ್ತಿದ ಈತ ಕರೆಂಟ್ ವಯರ್ ಸ್ಪರ್ಶಿಸಿದ್ದು ಕರೆಂಟ್ ಅಪಘಾತಕ್ಕೆ ಯುವಕ ಕೊನೆಯಿಸಿರೆಳೆದಿದ್ದಾನೆ.
ಮಾವಿನ ಮರದ ಟೊಂಗೆಗೆ ತಾಗಿಯೇ ವಿದ್ಯುತ್ ತಂತಿ ಪಾಸಾಗಿದ್ದು ಮೆಸ್ಕಾಂ ಅಧಿಕಾರಿಗಳು ಕಟಾವು ಗೊಳಿಸದೇ ಬಿಟ್ಟಿರುವುದು ಈ ಮರಣಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕ ತೊಕ್ಕೊಟ್ಟು ನಲ್ಲಿರುವ ಸಾಗರ್ ಕಲೆಕ್ಷನ್ ನಲ್ಲಿ ಸೂಪರ್ ವೈಸರ್ ಆಗಿ ಕಳೆದ 14 ವರುಷಗಳಿಂದ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.