ಶಿವಮೊಗ್ಗ: ಭೀಕರ ರಸ್ತೆ ಅಪಘಾತದಲ್ಲಿ ಪತಿ ಮತ್ತು ತುಂಬು ಗರ್ಭಿಣಿ ಪತ್ನಿ ದಾರುಣವಾಗಿ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೇಡರ ಹೊಸಳ್ಳಿ ಕೆರೆಯ ಬಳಿ ಶುಕ್ರವಾರ ನಡೆದ
ಬೇಡರ ಹೊಸಳ್ಳಿ ಕೆರೆಯ ಏರಿಯ ಮೇಲೆ ಶಿವಮೊಗ್ಗ ಕಡೆಯಿಂದ ಹೋಗುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಹೊನ್ನಾಳಿ ಕಡೆಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಐ20 ಕಾರು ಢಿಕ್ಕಿ ಹೊಡೆದಿದೆ. ಓಮ್ನಿ ಕಾರು ನುಜ್ಜುಗುಜ್ಜಾಗಿದ್ದು, ದಾವಣಗೆರೆ ಕಡೆ ಸಾಗುತ್ತಿದ್ದ ಧನಂಜರಿ(35) ಪತ್ನಿ ರೋಜಾ(23) ಚೇತನ್(23)ಸುನೀತಾ ಎಂಬುವರಿಗೆ ಗಾಯಗಳಾಗಿತ್ತು. ಇವರನ್ನು ಮೆಗ್ಗಾನ್ ಗೆ ದಾಖಲಿಸಲಾಗಿತ್ತು.
ಧನಂಜರಿ ಯವರು ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೆಲ ಹೊತ್ತಲ್ಲಿ ಪತ್ನಿ, ತುಂಬು ಗರ್ಭಿಣಿಯಾಗಿದ್ದ ರೋಜಾ ಅಸುನೀಗಿದ್ದು ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಬಜಾವ್ ಮಾಡಲು ಮೆಗ್ಗಾನ್ ನಲ್ಲಿ ವೈದ್ಯರು ತುರ್ತು ಘಟಕ ವಿಭಾಗದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಪ್ರಯತ್ನ ಪಟ್ಟರಾದರೂ ಅಪಘಾತದ ತೀವ್ರತೆಗೆ ಮಗು ಗರ್ಭದಲ್ಲೇ ಮೃತಪಟ್ಟಿದೆ ಎಂದು ವರದಿಯಾಗಿದೆ.
ಚೇತನ್ ಮತ್ತು ಸುನೀತರನ್ನ ಮೆಗ್ಗಾನ್ ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓಮ್ನಿ ಕಾರನ್ನ ಚಲಾಯಿಸುತ್ತಿದ್ದ ಧನಂಜರಿಗೆ ಕಾಲಿಗೆ ತೀವ್ರಗಾಯಗಳಾಗಿತ್ತು. ಪತಿ ಮೃತಪಟ್ಟು ಒಂದು ಗಂಟೆಯ ನಂತರ ಪತ್ನಿ ರೋಜಾ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.