ಸುಳ್ಯ: ಕಲ್ಲುಗುಂಡಿ ಮುಹಿಯದ್ದೀನ್ ಜುಮ್ಹಮಸೀದಿಯ ಅಧೀನದಲ್ಲಿ ಫಾತಿಮಾ ಮಹಿಳಾ ಶರೀ ಅತ್ ಕಾಲೇಜು (ಫಾಳ್ಹಿಲಾ ಬಿರುದು) ಶನಿವಾರದಂದು ಬಹು: ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕುನ್ನುಂಗೈ ಇವರು ಹಯಾತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಮಹಿಳಾ ಕಾಲೇಜ್ ಅಧ್ಯಕ್ಷ ರಾದ ಯಸ್ ಆಲಿ ಹಾಜಿಯವರು ವಹಿಸಿದ್ದರು. ಜಮಾತಿನ ಖತೀಬರಾದ ಬಹು:ಅಹ್ಮದ್ ನಹೀಂ ಫೈಝಿ ಉಸ್ತಾದರು ಪ್ರಾಸ್ತಾವಿಕ ಭಾಷಣ ಮಾಡಿದರು.
ಸಭೆಯ ಅಧ್ಯಕ್ಷ ತೆಯನ್ನು ಫಾತಿಮಾ ಮಹಿಳಾ ಶರೀಯತ್ ಕಾಲೇಜ್ ಅಧ್ಯಕ್ಷರಾದ ಯಸ್ ಆಲಿ ಹಾಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟ್ಯಾರ್, ಸಿರಾಜುಲ್ ಇಸ್ಲಾಂ ಎಸೋಸಿಯೇಶನ್ ಕಲ್ಲುಗುಂಡಿ ಇದರ ಅಧ್ಯಕ್ಷರಾದ ಏ ಕೆ ಇಬ್ರಾಹಿಂ, ಅಶ್ರಫ್ ಯಚ್ ಏ ಅಧ್ಯಕ್ಷರು ಸಂಟ್ಯಾರ್ ಚಾರಿಟೇಬಲ್ ಟ್ರಸ್ಟ್ ಬಾಲಂಬಿ, ಪಿ ಏ ಅಬ್ದುಲ್ಲ ಹಾಜಿ ಅಧ್ಯಕ್ಷರು ಜುಮ್ಹಮಸೀದಿ ಗೂನಡ್ಕ, ಹಾಜಿ ಅಶ್ರಫ್ ಗುಂಡಿ ಅಧ್ಯಕ್ಷರು ಜುಮ್ಹಮಸೀದಿ ಅರಂತೋಡು ಅಲ್ಲದೆ ರಿಯಾಝ್ ಫೈಝಿ ಖತೀಬರು ಪೇರಡ್ಕ, ಬಹು:ಹಾಜಿ ಇಸ್ಹಾಕ್ ಬಾಖವಿ ಖತೀಬರು ಅರಂತೋಡು, ಜಮಾಲುದ್ದೀನ್ ಅಮಾನಿ ಖತೀಬರು ಸಂಪಾಜೆ, ಮಹಮ್ಮದಾಲಿ ಸಖಾಪಿ ಖತೀಬರು ಗೂನಡ್ಕ ಮಸೀದಿ, ಅಬ್ದುಲ್ ಹಮೀದ್ ಅಂಜದಿ ಕಾಮಿಲ್ ಸಖಾಪಿ ಖತೀಬರು ಕೊಯನಾಡು ಮಸೀದಿ, ಬಹು ರಝಾಕ್ ಯಸ್ ಏ ಅಧ್ಯಕ್ಷ ರು ಜುಮ್ಹಾಮಸೀದಿ ಕೊಯನಾಡು, ಹಾಜಿ ಇಬ್ರಾಹಿಂ ಕತಾರ್, ಉಸ್ತಾದ್ ಅಬ್ದುಲ್ ಕಾದರ್ ಫೈಝಿ, ಉಸ್ತಾದ್ ಮಹಮ್ಮದ್ ಮುಂಡೋಲೆ ಮೊದಲಾದ ವರು ಬಾಗವಹಿಸಿದ್ದರು.
ಶರೀಯತ್ ಕಾಲೇಜಿನ ಉಪಾಧ್ಯಕ್ಷ ರಾದ ತಾಜ್ ಮಹಮ್ಮದ್ ಸಂಪಾಜೆ ಯವರು ಸ್ವಾಗತಿಸಿದರು. ಹಾಜಿ ಅಬ್ಬಾಸ್ ಸಂಟ್ಯಾರ್ ಧನ್ಯವಾದ ಸಲ್ಲಿಸಿದರು ಅಬ್ದುಲ್ ನಾಸರ್ ಫೃಝಿ ಸದರ್ ಮುಹಲ್ಲಿಂ ಹಾಗೂ ಝಕರಿಯ ಉಸ್ತಾದರು ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಸಯ್ಯದ್ ಫಝಲ್ ಕೋಯಮ್ಮ ತಂಙಲ್ ರವರ ದು:ಆದೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು