';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಲ್ಲಡ್ಕ: ಸತ್ಯ ದಾರಿಯಲ್ಲಿ ಅರಿವು ಮೂಡಿಸಿದ ಮಹಾನ್ ನಾಯಕರ, ಪುಣ್ಯ ಪುರುಷರ ತ್ಯಾಗೋಜ್ವಲ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆ ಅರಿತು ಬದುಕುವುದಾಗಿದೆ ಪುಣ್ಯದಾಯಕ ಎಂದು ಕಲ್ಲಡ್ಕ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಹೇಳಿದರು.
ಅವರು ಇಂದು ಕಲ್ಲಡ್ಕ ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ಜರಗಿದ ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ದಿನಾಚರಣೆಯನ್ನು ಆಚರಿಸಿ ಮಾತನಾಡಿದರು.
ಮುನೀರುಲ್ ಇಸ್ಲಾಂ ಮದ್ರಸ ಸದರ್ ಲತೀಫ್ ದಾರಿಮಿ ಮಾತಾಡಿ, ಸಮಸ್ತ ಎಂಬ ಪರಮ ಶ್ರೇಷ್ಟ ಸಂಘಟನೆ ನ್ಯೂನತೆಯ ಅಪವಾದ ಇಲ್ಲದೇ, ಆಧ್ಯಾತ್ಮಿಕ ಗುರುವರ್ಯರ ಹಿಂಬಾಲಕರಾದಲ್ಲಿ ನಮ್ಮ ಯಶಸ್ವಿ ಮುನ್ನಡೆಗೆ ದಾರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಹಾಫಿಳ್ ಇಸ್ಮಾಯಿಲ್ ಉಸ್ತಾದ್, ಮಜೀದ್ ಯಮಾನಿ,ಖಾಸಿಂ ಯಮಾನಿ, ನಾಸಿರ್ ಉಸ್ತಾದ್,ಸಾದಿಕ್,ನವಾಝ್ ಉಪಸ್ಥಿತರಿದ್ದರು, ಅಬೂಬಕ್ಕರ್ ಸಾಹೇಬ್ ಸ್ವಾಗತಿಸಿ, ಅಬ್ದುಲ್ ಹಮೀದ್ ವಂದಿಸಿದರು.