ಮಾಣಿ: ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಇಂದು ನಡೆದಿದೆ.
ಮೃತಪಟ್ಟ ಯುವಕನನ್ನು ನಝೀರ್ ಎಂದು ಗುರುತಿಸಲಾಗಿದೆ,
ಮನೆಯಲ್ಲಿ ಎಲ್ಲರೂ ಜೊತೆಗಿದ್ದು ಮಾತನಾಡುತ್ತಿದ್ದಾಗ ರೂಮಿಗೆ ಹೋಗಿ ಚಿಲಕ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದು
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಉಪ್ಪಳದಲ್ಲಿ ಕೆಲಸಕ್ಕಿದ್ದ ನಝೀರ್ ಎರಡು ದಿನಗಳ ಹಿಂದಯಷ್ಟೇ ಮನೆಗೆ ಬಂದಿದ್ದರು.
ನಝೀರ್ ಕುಟುಂಬ ಕಡೇಶಿವಾಲಯ ಕಲ್ಲಾಜೆ ಮೂಲದವರಾಗಿದ್ದು, ಕೊಡಾಜೆಯ ಪ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದರು.