ಧೆಂಕನಕಲ್: ಪತಿ ಪತ್ನಿ ಜಗಲ ತಾರಕ್ಕೇರಿ ಪತ್ನಿಯ ತಲೆಕಡಿದ ಗಂಡ ಆಕೆಯ ರುಂಡದೊಂದಿಗೆ ಸುಮಾರು 12 ಕಿಲೋ ಮೀಟರ್ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದ ಭಯಾನಕ ಘಟನೆ ಒಡಿಶಾದ ಧೆಂಕನಕಲ್ ಪ್ರದೇಶದಲ್ಲಿ ನಡೆದಿದೆ.

ಪತ್ನಿಯ ತುಂಡರಿಸಿದ ತಲೆಯೊಂದಿಗೆ ಸಮೀಪದ ಪೊಲೀಸ್ ಠಾಣೆಗೆ ತೆರಳುತ್ತಿದ್ದ ವ್ಯಕ್ತಿಯ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮೃತ ಮಹಿಳೆಯನ್ನ ಶುಚಲಾ ಮಾಝಿ ಎಂದು ಗುರುತಿಸಲಾಗಿದ್ದು ಕಟ್ಟಿಕೊಂಡ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿ ತನಗೆ ವಿಶ್ವಾಸದ್ರೋಹ ಮಾಡಿದ್ದಾಳೆಂದು ಶಂಕಿಸಿ ಆಕೆಯ ಶಿರಚ್ಛೇದ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯನ್ನು ಗುರುತಿಸಿರುವ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಇದರ ಬೆನ್ನಲ್ಲೇ ಆತನನ್ನ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಘಟನೆಯಿಂದ ಇಡೀ ಗ್ರಾಮವೇ ಸ್ಥಬ್ದ ಗೊಂಡಿದೆ.