ಸುಳ್ಯ: ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಹೆಚ್ಚಾದಂತೆ ಪ್ರವೀಣ್ ಪಾರ್ಥಿವ ಶರೀರವನ್ನು ನೋಡಲು ಬಂದ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಹಿಂದೂ ಮುಖಂಡ ಪ್ರಭಾಕರ್ ಭಟ್, ಶಾಸಕ ಹರೀಶ್ ಪೂಂಜಾ ರವರು ಬೆಳ್ಳಾರೆಗೆ ಆಗಮಿಸುತ್ತಿದ್ದಂತೆ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ತಮ್ಮ ನಾಯಕನ ವಿರುದ್ಧ ಧಿಕ್ಕಾರ ಕೂಗಿದರು.

ಇದೇ ವೇಳೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಲಾಠಿ ಚಾರ್ಜ್ ನಡೆಸಿದ್ದು ಹಲವಾರು ಹಿಂದೂ ಕಾರ್ಯಕರ್ತರು ಗಾಯ ಗೊಂಡಿದ್ದಾರೆ.
ಪುತ್ತೂರು ನಿಂದ ಮೆರೆವಣೆಗೆಯಲ್ಲಿ ಪ್ರವೀಣ್ ರವರ ಶವವನ್ನು ಸವಣೂರು ಮಾರ್ಗವಾಗಿ ತರಲಾಗಿದ್ದು, ಬೆಳ್ಳಾರೆ ತಲುಪಲು ಹತ್ತಿರ ಮಾರ್ಗವಿತ್ತು. ಆದರೆ ದೂರದ ನಿಂತಿಕಲ್ಲು ಮಾರ್ಗವಾಗಿ ಮೆರೆವಣೆಗೆ ನಡೆಸಿದ್ದು, ನಿಂತಿಕಲ್ಲು ಬಳಿ ಮುಸ್ಲಿಂ ವ್ಯಕ್ತಿಯ ಬೈಕನ್ನು ಇದೇ ವೇಳೆ ದುಷ್ಕರ್ಮಿಗಳು ದ್ವಂಸಗೈದಿದ್ದಾರೆ.
ಮೆರೆವಣೆಗೆ ವೇಳೆ ಬಸ್ಸಿಗೆ ಕಲ್ಲು ತೂರಾಟ, ಸಿಸಿ ಕ್ಯಾಮರಾ ದ್ವಂಸಗೈದಿದ್ದಾರೆ. ಇದೇ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಪ್ರಸ್ತುತ ಘಟನೆಯಿಂದ ಬೆಳ್ಳಾರೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ.