ಮಂಗಳೂರು: ನಿನ್ನೆ ರಾತ್ರಿ ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ನ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ಮಂಗಳಪೇಟೆಯ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಸ್ಪತ್ರೆಯಿಂದ ಮೃತದೇಹವನ್ನು ಪೋಸ್ಟ್ ಮಾರ್ಟಂ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ತದ ನಂತರ ಫಾಝಿಲ್ ನ ಮನೆಗೆ ಮೃತದೇಹವನ್ನು ಮೆರೆವಣೆಗೆ ಮೂಲಕ ಕರ ತರಲಾಯಿತು.
ಮನೆಯಲ್ಲಿ ಅಂತಿಮ ದರ್ಶನ ಮುಗಿಸಿ ಸ್ಥಳೀಯ ಮಸೀದಿಗೆ ಮೃತದೇಹವನ್ನು ಕೊಂಡೊಯ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೆರೆವಣೆಗೆಯಲ್ಲಿ ಯಾವುದೇ ಕಲಹ, ಗದ್ದಲವಿಲ್ಲದೇ ಅಹಿತಕರ ಘಟನೆ ಸಂಭವಿಸದೇ ಮೃತದೇಹದ ಮೆರೆವಣೆಗೆ ನಡೆಯಿತು.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಸೆಕ್ಷನ್ 144 ಜಾರಿಗೊಳಿಸಿದ್ದು ಪೊಲೀಸರು ಬೀಡು ಬಿಟ್ಟಿದ್ದಾರೆ.
ಫಾಝಿಲ್ ಅಂತಿಮ ದಶನಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗುತ್ತಿದ್ದಾರೆ.
ಹಲವರು ವಶಕ್ಕೆ!: ನಿನ್ನೆ ರಾತ್ರಿಯಿಂದ 12 ಜನರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರು ಫಾಝಿಲ್ ಹತ್ಯೆಗೆ ಸಂಭಂಧಪಟ್ಟವರಲ್ಲ. ನಿಷೇದಾಜ್ಞೆ ನಡುವೆ ಅನುಮಾನಾಸ್ಪದ ಓಡಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎನ್ನಲಾಗಿದೆ.