ಮಂಗಳೂರು: ನಗರದ ಹೊರವಲಯ ಸುರತ್ಕಲ್ ಎನ್ಐಟಿಕೆಯಲ್ಲಿ ಗೆಳೆಯನ ಜೊತೆ ವಿಹಾರಕ್ಕೆ ಬಂದಿದ್ದ ಯುವತಿ ಮೇಲೆ ಮೀನು ಸಾಗಣೆಯ ಲಾರಿಯ ಚಾಲಕನೊಬ್ಬ ಅತ್ಯಾಚಾರ ನಡೆಸಿ, ಅದನ್ನು ವೀಡಿಯೋ ಮಾಡಿ ಬೆದರಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮುನಾಝ್( 30) ಅಹಮದ್ ಎಂದು ಗುರುತಿಸಲಾಗಿದೆ.
ಜು.27ರಂದು ಎನ್ಐಟಿಕೆಯ ಸಮೀಪದ ಕಡಲ ಕಿನಾರೆಯಲ್ಲಿ ಗೆಳೆಯನ ಜೊತೆ ವಿಹಾರಕ್ಕೆ ಯುವತಿ ಆತನ ಜೊತೆ ಅನ್ಯೋನ್ಯವಾಗಿದ್ದ ದೃಶ್ಯವನ್ನು ಮೊದಲು ಸೆರೆ ಹಿಡಿದು ನಂತರ ಅದನ್ನು ಯುವತಿಗೆ ತೋರಿಸಿ, ಗೆಳೆಯನನ್ನು ಸ್ಥಳದಿಂದ ಓಡಿಸಿ ನಂತರ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದನು.
ಲೈಂಗಿಕ ಸಂಪರ್ಕ ನಡೆಸುವ ವೀಡಿಯೊವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ಯುವತಿಗೆ ಬೆದರಿಕೆ ಹಾಕಿದ್ದನು. ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
‘ಆರೋಪಿಯು ಇದೇ ರೀತಿ ಬೇರೆ ಯುವತಿಯರಿಗೂ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಹಾಗಾಗಿ ಬಳಿಕ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ. ಆತನ ಮೊಬೈಲ್ ಗಳನ್ನೂ ವಶಕ್ಕೆ ಪಡೆದಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.