ದಾವಣಗೆರೆ: ಬೆಣ್ಣಿ ನಗರಿ ದಾವಣಗೆರೆ ಕರ್ನಾಟಕದ ಮಟ್ಟಿನ ಅತೀ ದೊಡ್ಡ ಸಂಭ್ರಮಕ್ಕೆ ಇಂದು ಸಾಕ್ಷಿಯಾಗಲಿದೆ ಕಾರ್ಯಕ್ರಮದ ನಿಯೋಜಕರು ಹೇಳುವಂತೆ ಈ ಕಾರ್ಯಕ್ರಮ ದಸರಾ ಹಬ್ಬಕ್ಕಿಂತಲೂ ದೊಡ್ಡದಾದ ಕಾರ್ಯಕ್ರಮವಂತೆ
ಹಾಗಾದರೆ ಆ ಕಾರ್ಯಕ್ರಮದ ವಿಶೇಷಗಳನ್ನು ಕೇಳಿದರೆ ನೀವು ಬೆಚ್ಚಿ ಬೀಳ್ತೀರಾ ಖಂಡಿತಾ.
ರಾಜ್ಯ ಕಂಡ ಅಪ್ರತಿಮ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಇಂದು 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮ ಸಿದ್ದರಾಮಯ್ಯರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ತನ್ನ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನಿನ್ನೆ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದು ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ಪಕ್ಷದ ಮುಖಂಡರು ಭರ್ಜರಿ ಸ್ವಾಗತ ಕೋರಿದ್ದಾರೆ.
ಇದೀಗ ದಾವಣಗೆರೆಯ ಪ್ಯಾಲೇಸ್ ಗ್ರೌಂಡ್ ನಲ್ಲಿ ಕರ್ನಾಟಕದ ಮಟ್ಟಿನಲ್ಲಿ ಅತೀ ದೊಡ್ಡದಾದ ಕಾರ್ಯಕ್ರಮ ನಡೆಯುತ್ತಿದ್ದು ಸುಮಾರು 6 ಲಕ್ಷ ಜನರು ಬಾಗವಹಿಸುವ ನಿರೀಕ್ಷೆ ಇದೆ.
ಇನ್ನು ಬೆಳಗ್ಗೆ 9 ಗಂಟೆಯಿಂದಲೇ ಊಟ ನೀಡುವ ಕಾರ್ಯ ಮುಂದುವರೆದಿದ್ದು 6 ಲಕ್ಷ ಜನರಿಗೆ ಊಟ ವಿತರಿಸಲು ಸುಮಾರು 300 ಕೌಂಟರ್ ಗಳು ಸಜ್ಜು ಗೊಂಡಿವೆ.
ಇನ್ನು ನಿನ್ನೆಯಿಂದಲೇ ಅಡಿಗೆ ಕೆಲಸ ಕಾರ್ಯಗಳು ನಡೆಯುತ್ತಿದ್ದು ಸುಮಾರು 2000 ಅಡಿಗೆ ಭಟರು ಮತ್ತು ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ರಾಜ್ಯದಿಂದ ಸುಮಾರು 3000 ಬಸ್ಸುಗಳಲ್ಲಿ ಸಿದ್ದರಾಮಯ್ಯರ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಮಂದಿ ದಾವಣಗೆರೆಯತ್ತ ತೆರಳುತ್ತಿದ್ದು ರಾಜ್ಯ ಕಂಡ ಅತೀ ದೊಡ್ಡ ಕಾರ್ಯಕ್ರಮ ಇದು ಎಂದು ಬಣ್ಣಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಬಂದವರಿಗೆಲ್ಲಾ ಮೈಸೂರ್ ಪಾಕ್ ವಿತರಿಸಲಾಗುತ್ತಿದ್ದು ಸುಮಾರು 6 ಲಕ್ಷ ಮೈಸೂರ್ ಪಾಕ್ ಮತ್ತು 2000 ಕೆ.ಜಿ ಯ ಬೂಂದಿ ಲಡ್ಡು ರೆಡಿಯಾಗಿದೆ.
ಇನ್ನು ಸಿದ್ದರಾಮಯ್ಯರ 75 ವರ್ಷಗಳ ಹಿಂದಿನ ಎಲ್ಲಾ ನೆನಪುಗಳನ್ನು ಬಿತ್ತರಿಸಲಿದೆ
3D ಲೇಸರ್ ಲೈಟ್ ತಂತ್ರಜ್ಞಾನ
ಇದು ಕರ್ನಾಟಕ ದಲ್ಲೇ ಮೊದಲ ಬಾರಿ ಇಷ್ಟು ದೊಡ್ಡ ಮಟ್ಟಿನ 3D ಲೇಸರ್ ಲೈಟ್ ಮೂಲಕ ಚಿತ್ರಣ ತೋರಿಸುವುದು.
ಕೆ.ಆರ್ ಮಾಲ್ ನ ಗೋಡೆ ಮೇಲೆ ಚಿತ್ರಣ ಕಾಣಲಿದೆ.
ಇನ್ನು ಆಗಮಿಸುವ ಅಭಿಮಾನಿಗಳಿಗೆ ಕುಳಿತುಕೊಳ್ಳಲು ಸುಮಾರು 3 ಲಕ್ಷ ಕುರ್ಚಿಗಳನ್ನು ಇರಿಸಲಾಗಿದ್ದು, ಮಳೆ ಬಿಸಿಲು ಬೀಳದಂತೆ ಸುಮಾರು 4 ಲಕ್ಷ ಜನರು ಆಸೀನರಾಗುವ ಬೃಹತ್ ಮಟ್ಟದ ಪೆಂಡಾಲ್ ನಿರ್ಮಿಸಿದ್ದಾರೆ.
ಇನ್ನು ವೇದಿಕೆಯಲ್ಲಿ 300 ಜನ ಗಣ್ಯರಿಗೆ ಕುಳಿತುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮ ದಾವಣಗೆರೆಯ ಪ್ಯಾಲೇಸ್ ಮೈದಾನದ 50 ಎಕ್ರೆ ಜಾಗದಲ್ಲಿ ನಡೆಯುತ್ತಿದೆ.
ಬೆಳಿಗ್ಗಿನಿಂದಲೇ 7-8 ಕಿ.ಮೀ ಉದ್ದಕ್ಕೆ ಟ್ರಾಫಿಕ್ ಸಮಸ್ಯೆಗಳು ಉಂಟಾಗಿದ್ದು ಸಾವಿರಾರು ಮಂದಿ ಸ್ವಯಂ ಸೇವಕರು ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ನಿನ್ನೆಯಿಂದಲೇ ದಾವಣಗೆರೆಯತ್ತ ಲಕ್ಷಾಂತರ ಮಂದಿಗಳು ಹರಿದು ಬರುತ್ತಿದ್ದು
ಸಿದ್ದರಾಮಯೋತ್ಸವ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಬರೆದಿಡಬೇಕಾದ ಐತಿಹಾಸಿಕ ಹಬ್ಬವಾಗಲಿದೆ.