dtvkannada

'; } else { echo "Sorry! You are Blocked from seeing the Ads"; } ?>

ಮುಂಬೈ: ನವ ಯುಗಕ್ಕೆ ತಕ್ಕಂತೆ ತಯಾರಿಸಲಾದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯೊಂದು ಸ್ಪೋಟಗೊಂಡು ಏಳು ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮುಂಬೈನ ವಸಾಯಿಯಲ್ಲಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಶಬೀರ್ ಶಹನವಾಜ್ ಅನ್ಸಾರಿ(೭) ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ವಸಾಯಿ ರಾಮದಾಸ್ ನಗರದ ನಿವಾಸಿ ಶಹನವಾಜ್ ಅನ್ಸಾರಿ ಎಂಬುವರು ಸೆ.23ರಂದು ಬೆಳಗಿನ ಜಾವ 2.30ರ ಸುಮಾರಿಗೆ ತಮ್ಮ ಎಲೆಕ್ನಿಕ್ ಸ್ಕೂಟರ್‌ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಮನೆಯ ಹಾಲ್‌ನಲ್ಲಿ ಇಟ್ಟಿದ್ದು ಆದರೆ, ಬೆಳಗಿನ ಜಾವ 5:30ರ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡಿದೆ.

ಸ್ಕೂಟರ್‌ನ ಬ್ಯಾಟರಿ ಸ್ಫೋಟಿಸಿದ ಪರಿಣಾಮ ಅದೇ ಹಾಲ್‌ನಲ್ಲಿ ಮಲಗಿದ್ದ ಬಾಲಕ ಶಬ್ಬಿರ್ ಹಾಗೂ ತಾಯಿ ರುಕ್ಸಾನಾ ಗಂಭೀರ ಗಾಯಗೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಶಬೀರ್ ಗೆ ಶೇ.70ರಿಂದ 80ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ವರದಿಯಾಗಿದೆ.

ಈ ಸಾವಿಗೆ ಸ್ಕೂಟಿ ಕಂಪನಿಯೇ ನೇರ ಕಾರಣವೆಂದು ಮೃತ ಬಾಲಕನ ಕುಟುಂಬಸ್ಥರು ಆರೋಪಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!