';
}
else
{
echo "Sorry! You are Blocked from seeing the Ads";
}
?>

';
}
else
{
echo "Sorry! You are Blocked from seeing the Ads";
}
?>
ಉಡುಪಿ: ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಪಾಂಡೇಶ್ವರ ಸಾಸ್ತಾನ ಮೂಲದ ಜಾಕ್ಸನ್ ಒಲಿವೇರಾ (50) ಎಂದು ತಿಳಿದು ಬಂದಿದೆ.
ನಿನ್ನೆ ಅವರು ಎಂದಿನಂತೆ ಕೆಲಸದಿಂದ ಹಿಂದಿರುಗಿದ ನಂತರ ಕುವೈಟ್ ನಲ್ಲಿನ ತಮ್ಮ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಜಾಕ್ಸನ್ ಅವರ ಮೃತದೇಹ ಇದೀಗ ಆಸ್ಪತ್ರೆಯಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜಾಕ್ಸನ್ ಪತ್ನಿ ಡಯಾನಾ, ಮಕ್ಕಳಾದ ಜೋಶುವಾ ಮತ್ತು ದೀನ್ ಮತ್ತು ತಾಯಿಯನ್ನು ಅಗಲಿದ್ದಾರೆ.