ಮಂಗಳೂರು: ಜಂಕ್ಷನ್ ನಲ್ಲಿ ಶಾರದೋತ್ಸವಕ್ಕೆ ಹಾಕಿದ್ದ ಬ್ಯಾನರನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ದಿನಾಂಕ 08-10-2022 ಶನಿವಾರದಂದು ಮಧ್ಯರಾತ್ರಿ ಸಮಯ ನಗರದ ವಾಮಂಜೂರು ಜಂಕ್ಷನ್ ನಲ್ಲಿ ಶಾರದೋತ್ಸವ ಕಾರ್ಯಕ್ರಮಕ್ಕೆ ಶುಭಕೋರಲು ವಾಮಂಜೂರು ಫ್ರೆಂಡ್ಸ್ ಸಂಘಟನೆಯು ಸಾರ್ವಜನಿಕ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು.ಈ ಬಗ್ಗೆ ಪ್ರಕರಣ ಗಂಭೀರತೆ ಪಡೆದಿತ್ತು.
ಈಗ ಆರೋಪಿಗಳ ಬಂಧನವಾಗಿದ್ದು ಈ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ರೀತಿಯ ಕುಕೃತ್ಯಗಳು ಧಾರ್ಮಿಕ ಭಾವನೆಗಳನ್ನು ನಿಂದನೆಗೊಳಿಸುವ ಉದ್ದೇಶ ಅಡಗಿದೆ ಎಂದು ಆರೋಪಿಸಿ ಈ ಕೃತ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಪ್ರಕರಣವನ್ನು ಭೇಧಿಸಬೇಕೆಂದು ದೂರು ನೀಡಲಾಗಿತ್ತು.