ಪುತ್ತೂರು: ಸವಣೂರು ಮುಸ್ಲಿಂ ಯೂತ್ ವೆಲ್ಫೇರ್ ಅಸ್ಸೊಸಿಯೆಷನ್ ರಿಯಾದ್ ಇದರ 2022-23ನೇ ಸಾಲಿನ ವಾರ್ಷಿಕ ಸಭೆಯು ಅಕ್ಟೋಬರ್ 06ರಂದು ರಿಯಾದಿನ ಶಿಫಾ ಸಣಯ್ಯದ ಅನಸ್ ಹೌಸ್ ನಲ್ಲಿ ನಡೆಯಿತು.

ಅಶ್ರಫ್ ಬಿಸಿ ಅವರ ಅದ್ಯಕ್ಷತೆಯಲ್ಲಿ ಫಾತಿಹಾದೊಂದಿಗೆ ಸಭೆಯು ಆರಂಭಗೊಂಡಿತು. ಸಮಿತಿಯು ಕಳೆದ 24ವರ್ಷಗಳಿಂದ ಕಾರ್ಯಾಚರಿಸಿದ್ದು ಊರಿನ ಅಭಿವ್ರಿದ್ದಿ ಕಾರ್ಯಗಳಿಗೆ ,ಬಡ ಅನಾಥ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ ಹಾಗು ಇನ್ನಿತರ ದೀನಿ ಹಾಗು ಸಾಮಾಜಿಕ ಕಾರ್ಯಗಳಿಗೆ ಸಹಾಯಿಯಾಗಿದ್ದು ಇನ್ನು ಮುಂದೆಯೂ ಎಲ್ಲಾ ಸದಸ್ಯರ ಸಹಕಾರ ಅಗತ್ಯವಿದೆ ಎಂದು ಅಶ್ರಫ್ ಬಿಸಿ ಸಾಂದರ್ಭಿಕವಾಗಿ ಮಾತನಾಡಿದರು.
ಬಷೀರ್ ಚೆನ್ನಾರ್ ಅವರು ವಾರ್ಷಿಕ ವರದಿ ಮಂಡಿಸಿದರು.ನಂತರ ನೂತನ ವರ್ಷದ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಖಾದರ್ ಚೆಡವು , ಅಧ್ಯಕ್ಷರಾಗಿ ನೌಫಲ್ ಚೆಡವು,ಕಾರ್ಯದರ್ಶಿಯಾಗಿ ಅರ್ಷದ್ ಅರಿಗೆಮಜಲ್,ಉಪಾಧ್ಯಕ್ಷರಾಗಿ ಅನೀಫ್ ಕಡಬ ,ಕೋಶಾಧಿಕಾರಿಯಾಗಿ ಶಾಫಿ ಚಾಪಳ್ಳ,ಜೊತೆ ಕಾರ್ಯದರ್ಶಿಯಾಗಿ ಯಾಸಿರ್ ತುಂಬೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಬಷೀರ್ ಚೆಡವು,ಫಾರೂಕ್ ಕೊಡಿಪ್ಪಾಡಿ ,ಕಲಂದರ್ ಅತ್ತಿಕರೆ, ಅಬ್ಬಾಸ್ ಬಸ್ತಿ , ಸಿಯಾನ್ ಅತ್ತಿಕರೆ ,ಮುಸ್ತಫ ಚೆನ್ನಾರ್ ,ನವಾಫ್ ಮಂತೂರು ,ಮುಝಮ್ಮಿಲ್,ಶೊಹೈಬ್ ಅತ್ತಿಕರೆ ಹಾಗು ಇನ್ನಿತರರು ಉಪಸ್ಥಿತರಿದ್ದರು. ಅನ್ಸಾರ್ ಅರಿಗೆಮಜಲ್ ಸ್ವಾಗತಿಸಿದರು.ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.