dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಎಸ್ಡಿಪಿಐ ಕೂಡ ಬ್ಯಾನ್ ಮಾಡಲು ಚಿಂತನೆ ನಡೆಸ್ತಿದ್ದಾರೆ, ಬಿಜೆಪಿ ಸರ್ಕಾರ ನಮ್ಮನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ. SDPI ನಾಯಕರ ಮೇಲೆ ಸುಳ್ಳು ಕೇಸ್ ಹಾಗೂ ಬಂಧನ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ SDPI ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪಿಎಫ್ಐ ಮಾದರಿ ಎಸ್ಡಿಪಿಐ ಕೂಡ ಬ್ಯಾನ್ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದ ಮೇಲೆ SDPI ಕಿಡಿ

'; } else { echo "Sorry! You are Blocked from seeing the Ads"; } ?>

ಬಿಜೆಪಿ ಸರ್ಕಾರ ಪೊಲೀಸರನ್ನ ಬಳಸಿಕೊಂಡು ನಮ್ಮನ್ನ ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ. ಎಸ್ಡಿಪಿಐ ನೋಂದಾಯಿತ ರಾಜಕೀಯ ಪಕ್ಷ. 13 ವರ್ಷಗಳಿಂದ ಆಯೋಗಕ್ಕೆ ದಾಖಲೆ ನೀಡುತ್ತ ಬಂದಿದೆ. PFI ಬ್ಯಾನ್ ಬಳಿಕ SDPI ನಿಷೇಧಿಸುವ ಚಿಂತನೆ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರ್ವಾಧಿಕಾರಿ ಧೋರಣೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿರುವ ಎಸ್ಡಿಪಿಐನ 2 ಕಚೇರಿಗೆ ನುಗ್ಗಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಾವು ಎಚ್ಚರಿಕೆಯನ್ನು ಕೊಡುತ್ತೇವೆ. ನಾವು ನಿಮ್ಮ ಕಿರುಕುಳದಿಂದ ಹಿಂದೆ ಸರಿಯುವುದಿಲ್ಲ. ಸೈದ್ಧಾಂತಿಕವಾಗಿ ಎದುರಿಸಿ, ಖಾಕಿ ಬಿಟ್ಟು ಹೆದರಿಸೋದಲ್ಲ ಎಂದಿದ್ದಾರೆ.

ನಿಮಗೆ ನಮ್ಮ ತೆರಿಗೆ ಹಣದಲ್ಲಿ ನೀಡಿರುವ ಖಾಕಿ ಬಟ್ಟೆ ಹಾಕಿರೋದಾ? ಆರ್​ಎಸ್​ಎಸ್ ನವ್ರು ಕೊಟ್ಟ ಚಡ್ಡಿ ಧರಿಸಿದಿರಾ ಎಂದು ಮಂಗಳೂರು ಪೊಲೀಸ್ ಕಮಿಷನರ್​ಗೆ SDPIನ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಪ್ರಶ್ನೆ ಮಾಡಿದರು. ಮಂಗಳೂರಿನಲ್ಲಿ ಹಿರೋಯಿಸಂ, ದುಷ್ಟತನ ಮಾಡ್ತಿದ್ದಾರೆ. ಹಿಂದೂ ಮುಖಂಡರನ್ನ ಕೊಲೆ ಮಾಡುವ ಕುತಂತ್ರ ಮಾಡ್ತಿದ್ದಾರೆ. SDPI ಮುಖಂಡರನ್ನ ಬಂಧಿಸಿದ್ದಾರೆ. ಇದಕ್ಕೆ ಯಾವ್ದಾದ್ರೂ ದಾಖಲೆಗಳು ಇದೆಯಾ? ಡಿಜಿಪಿ, ಎಡಿಜಿಪಿ, ಚುನಾವಣಾ ಆಯೋಗಕ್ಕೂ ಈ ಬಗ್ಗೆ ದೂರು ನೀಡಿದ್ದೇವೆ. PFIನ ಜೊತೆ ನಾವು ಏನಾದ್ರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಿ ಎಂದರು.

'; } else { echo "Sorry! You are Blocked from seeing the Ads"; } ?>

ದೂರುದಾರ ಮಹೇಶ್ ಪ್ರಸಾದ್​ಗೆ ಸವಾಲ್ ಹಾಕಿದ ಭಾಸ್ಕರ್ ಪ್ರಸಾದ್ 

ದೂರುದಾರ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ನಿಮ್ಮ ದೈವ್ಯಗಳಾದ ಧರ್ಮಸ್ಥಳ ಅಣ್ಣಪ್ಪ, ಪಂಜುರ್ಲಿ ಮುಂದೆ ಆಣೆ ಮಾಡೋಣ ಬನ್ನಿ. ಯಾವ್ದೇ ತಪ್ಪು ಮಾಡದವರ ಮೇಲೆ ಸುಳ್ಳು ದೂರು ನೀಡ್ತಿರಲ್ಲ. ಪ್ರಮೋದ್ ಮುತಾಲಿಕ್, ಮೋಹನ್ ಭಾಗವತ್ ಅವ್ರು ಆಯುಧಗಳಿಗೆ ಬಹಿರಂಗವಾಗಿ ಪೂಜೆ ಮಾಡ್ತಾರೆ. ಇವ್ರ ಮೇಲೆ ಯಾವ್ದೇ ಕ್ರಮಗಳು ಆಗೋದಿಲ್ಲ ಏಕೆ? ಎಂದು ಭಾಸ್ಕರ್ ಅವರು ಪ್ರಶ್ನೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ SDPI ನ ರಾಜ್ಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಸೇರಿ ಕೆಲ SDPI ಮುಖಂಡರು ಭಾಗಿಯಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!