ಸುಳ್ಯ : ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಕಾರಿನಲ್ಲಿ ಜವಳಿ ವ್ಯಾಪಾರ ನಡೆಸುತ್ತಿದ್ದ ಇಬ್ಬರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ್ದು, ವ್ಯಾಪಾರಕ್ಕೆ ತಡೆಯೊಡ್ಡಿ ಎರಡು ತಾಸುಗಳ ಕಾಲ ಗಂಭೀರವಾಗಿ ಮಾರಣಾಂತಿಕ ಹಲ್ಲೆ ನಡೆಸಿ ಕಾರಿಗೆ ಹಾನಿಗೊಳಿಸಿದ ಅಮಾನವೀಯ ಘಟನೆಯನ್ನು ಎಸ್ ಡಿಪಿಐ ತೀವ್ರವಾಗಿ ಖಂಡಿಸಿದೆ.

ಹಲವಾರು ವರ್ಷಗಳಿಂದ ಜವಳಿ ವ್ಯಾಪಾರ ನಡೆಸುತ್ತಿರುವ ಯುವಕರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ ಆದರೆ ವ್ಯಾಪಾರಿಗಳು ಮುಸ್ಲಿಮರೆಂಬ ಕಾರಣಕ್ಕೆ ಬಿಜೆಪಿಯ ಕಾರ್ಯಕರ್ತರು ಇವರ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ನಡೆಸಿ ನಂತರ ಮಹಿಳೆಯ ಮೇಲೆ ಕೈ ಹಾಕಿದ್ದಾರೆ ಎಂಬ ಕಟ್ಟು ಕಥೆಗಳನ್ನು ಕಟ್ಟಿ ಆರೋಪಿಗಳು ಸುರಕ್ಷಿತರಾಗಿ ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಾಗಿರುವುದು ಖೇದಕರ ಎಂದು ಎಸ್’ಡಿ’ಪಿ’ಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಖಂಡನೆ ವ್ಯಕ್ತಪಡಿಸಿದ್ದಾರೆ.


ಆದುದರಿಂದ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇವರ ಕಟ್ಟು ಕಥೆಯನ್ನು ಬೇಧಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.