dtvkannada

'; } else { echo "Sorry! You are Blocked from seeing the Ads"; } ?>

ಸುಳ್ಯ: ಪುಟ್ಟ ಬಾಲಕನೋರ್ವನಿಗೆ ಹೃದಯಾಘಾತ ಸಂಭವಿಸಿ ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯದ ಅಮರ ಮುನ್ನೂರು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಬಾಲಕ ಅಮರಮುಡೂರು ತಾಲೂಕಿನ ಕುಕ್ಕುಜಡ್ಕ ಸ.ಹಿ.ಪ್ರಾ.ಶಾಲೆಯ 2 ನೇ ತರಗತಿ ವಿದ್ಯಾರ್ಥಿ ಕುಂಟಿಕಾನದ ಮೋಕ್ಷಿತ್ ಕೆ.ಸಿ. ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಶಾಲೆಗೆ ಹೋಗಿದ್ದ ಬಾಲಕನಿಗೆ ಮಧ್ಯಾಹ್ನದ ವೇಳೆ ಸ್ವಲ್ಪ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿಕ್ಷಕರು ದೂರವಾಣಿ ಮೂಲಕ ಜ್ವರ ಇರುವ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ.

ಬಾಲಕನ ತಂದೆ ಶಾಲೆಗೆ ಬಂದಿದ್ದು ಆ ಸಂದರ್ಭದಲ್ಲೇ ಬಾಲಕ ನಿಂತಲ್ಲಿಯೇ ಕುಸಿದು ಬಿದ್ದಿರುತ್ತಾನೆ ತಕ್ಷಣ ಶಿಕ್ಷಕರು ಹಾಗೂ ಸ್ಥಳೀಯರು ಸೇರಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದರು.

'; } else { echo "Sorry! You are Blocked from seeing the Ads"; } ?>

ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಬಾಲಕನಿಗೆ ಹೃದಯಾಘಾತ ಸಂಭವಿಸಿದ್ದರಿಂದ ಮೃತಪಟ್ಟಿರುವುದಾಗಿ ತಿಳಿಸಿದರೆಂದು ತಿಳಿದು ಬಂದಿದೆ.

ಬಾಲಕನ ತಂದೆ ಚಂದ್ರಶೇಖರ ಆಚಾರ್ಯ ಕುಂಟಿಕಾನ ಅದೇ ಶಾಲೆಯ ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾಗಿದ್ದು, ತಾಯಿ ಗೀತಾ ಮತ್ತು ಓರ್ವ ಸಹೋದರ ಅಕ್ಷಯ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾನೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!