dtvkannada

'; } else { echo "Sorry! You are Blocked from seeing the Ads"; } ?>

ಆಡಿಲೇಡ್‍ : ಟಿ20 ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಎದುರು ಆಂಗ್ಲರು ಪರಾಕ್ರಮ ಮೆರೆದು 10 ವಿಕೆಟ್ ಗಳ ಅತ್ಯಮೋಘ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಫಲಿತಾಂಶದಿಂದ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ಥಾನದ ರೋಚಕ ಕದನ ನಿರೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.

140 ಕೋಟಿ ಜನರ ಆಶಾಕಿರಣವನ್ನು ಹೊತ್ತು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಟೀಂ ಇಂಡಿಯಾ (Team India) ಬರಿಗೈಯಲ್ಲೇ ವಾಪಸ್ಸಾಗಿದೆ. ಅಡಿಲೇಡ್​ನಲ್ಲಿ ಗೆಲುವಿನ ಸ್ಪರ್ಧಿ ಎಂದೇ ಬಿಂಬಿತವಾಗಿದ್ದ ಟೀಂ ಇಂಡಿಯಾ ಸುಮಾರು 50 ಸಾವಿರ ಪ್ರೇಕ್ಷಕರ ಮುಂದೆ ಹೀನಾಯ ಸೋಲು ಅನುಭವಿಸಿದೆ. ಅಡಿಲೇಡ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೊಹ್ಲಿ (Virat Kohli) ಹಾಗೂ ಹಾರ್ದಿಕ್ ಅರ್ಧಶತಕದ ಆದಾರದ ಮೇಲೆ 169 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಆರಂಭಿಕರಿಬ್ಬರೂ ತಲಾ ಅರ್ಧಶತಕ ಸಿಡಿಸಿ ಮಿಂಚಿದರು.

'; } else { echo "Sorry! You are Blocked from seeing the Ads"; } ?>

ಮತ್ತೆ ಆರಂಭಿಕರ ಫ್ಲಾಪ್ ಶೋ: ಅಡಿಲೇಡ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರಿಂದ ಟೀಂ ಇಂಡಿಯಾಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಅಡಿಲೇಡ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಇಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ಇತಿಹಾಸವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಬಟ್ಲರ್ ಅವರ ಈ ನಿರ್ಧಾರ ಆಘಾತಕಾರಿಯಾಗಿತ್ತು. ಅದೇ ಸಮಯದಲ್ಲಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮೊದಲು ಬ್ಯಾಟಿಂಗ್ ಮಾಡಲು ಬಯಸುವುದಾಗಿ ಹೇಳಿದರು. ಆದರೆ ಬ್ಯಾಟಿಂಗ್ ಆರಂಭವಾದಗ ಇಡೀ ಕತೆಯೇ ಬದಲಾಯಿತು.

ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿ ಒಂದೇ ಒಂದು ದೊಡ್ಡ ಜೊತೆಯಾಟವನ್ನು ಆಡಿಲ್ಲ. ಇದರಿಂದಾಗಿ ಭಾರತವು ಪವರ್‌ಪ್ಲೇನಲ್ಲಿ ಒಮ್ಮೆಯೂ ಬಿರುಸಿನ ಆರಂಭವನ್ನು ಪಡೆಯಲಿಲ್ಲ. ಇಲ್ಲಿಯೂ ಇದೇ ಟ್ರೆಂಡ್ ಮುಂದುವರೆದಿದ್ದು, ಎರಡನೇ ಓವರ್‌ನಲ್ಲಿಯೇ ಕೆಎಲ್ ರಾಹುಲ್ ಔಟಾದರು. ಮತ್ತೊಮ್ಮೆ ವಿರಾಟ್ ಕೊಹ್ಲಿ ಮೇಲೆಯೇ ಟೀಂ ಇಂಡಿಯಾದ ಇನ್ನಿಂಗ್ಸ್ ಜವಬ್ದಾರಿ ಬಿತ್ತು. ಅದೇ ಸಮಯದಲ್ಲಿ ನಾಯಕ ರೋಹಿತ್ ಈ ಬಾರಿ ಅಬ್ಬರದ ಬ್ಯಾಟಿಂಗ್ ಮಾಡುವ ನಿರೀಕ್ಷೆ ಇತ್ತು. ಇಬ್ಬರೂ ಇನ್ನಿಂಗ್ಸ್ ನಿಭಾಯಿಸಿದರೂ ಅಗತ್ಯವಿದ್ದ ಆಕ್ರಮಣಶೀಲತೆ ಕಾಣಲಿಲ್ಲ.

'; } else { echo "Sorry! You are Blocked from seeing the Ads"; } ?>

ರೋಹಿತ್ಸೂರ್ಯ ಫ್ಲಾಪ್: ನಿಧಾನಗತಿಯ ಆರಂಭದ ನಂತರ ರೋಹಿತ್ ಶರ್ಮಾ ಔಟಾದರೆ, ಸೂರ್ಯಕುಮಾರ್ ಯಾದವ್ ವಿಕೆಟ್‌ನಿಂದ ದೊಡ್ಡ ಹೊಡೆತ ಬಿದ್ದಿತು. ಮೊದಲ ಬಾರಿಗೆ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಆಡುತ್ತಿರುವ ಸೂರ್ಯ, ಲೆಗ್ ಸ್ಪಿನ್ನರ್ ಆದಿಲ್ ರಶೀದ್ಗೆ ಬಲಿಯಾದರು. ಹೀಗಾಗಿ 12 ನೇ ಓವರ್‌ ಆಗುವಷ್ಟರಲ್ಲಿ ಭಾರತ 75 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇಲ್ಲಿಂದ ಕೊಹ್ಲಿ ಮತ್ತು ಹಾರ್ದಿಕ್ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು, ಆದರೆ ಅವರು ವೇಗವನ್ನು ಪಡೆಯಲು ಸಮಯ ತೆಗೆದುಕೊಂಡರು. ವಿಶ್ವಕಪ್‌ನಲ್ಲಿ ಕೊಹ್ಲಿ ತಮ್ಮ ನಾಲ್ಕನೇ ಅರ್ಧಶತಕವನ್ನು ಬಾರಿಸಿ, ನಂತರದ ಎಸೆತದಲ್ಲಿ ಕ್ರಿಸ್ ಜೋರ್ಡಾನ್​ಗೆ ಬಲಿಯಾದರು.

ಅವಮಾನ ತಪ್ಪಿಸಿದ ಹಾರ್ದಿಕ್: ಆದರೆ ಆರಂಭಿಕ ನಿಧಾನಗತಿಯ ನಂತರ ಬಿರುಸಿನ ಫಾರ್ಮ್ ತೋರಿದ ಹಾರ್ದಿಕ್ ಕೊನೆಯ 3 ಓವರ್‌ಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಹಾರ್ದಿಕ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕೊನೆಯ 3 ಓವರ್‌ಗಳಲ್ಲಿ ಹಾರ್ದಿಕ್ ಬ್ಯಾಟಿಂಗ್ ಬಲದಿಂದ ಭಾರತ 47 ರನ್ ಗಳಿಸಿ 6 ವಿಕೆಟ್‌ಗೆ 168 ರನ್‌ಗಳ ಸವಾಲಿನ ಸ್ಕೋರ್ ಗಳಿಸಿತು.

ಗುರಿ ಬೆನ್ನಟ್ಟಿದ ಆಂಗ್ಲರ ಆರಂಭಿಕರು ಮೊದಲಿನಿಂದಲೂ ಆಕ್ರಮಣಕಾರಿಯಾಗಿ ಭಾರತದ ಬೌಲರ್ ಗಳನ್ನು ದಂಡಿಸಿ ಅಳುಕದೆ ಸುಲಭದಲ್ಲಿ ಗುರಿ ಮುಟ್ಟಿದರು. 16 ಓವರ್ ಗಳಲ್ಲಿ 170 ರನ್ ಗಳಿಸುವ ಮೂಲಕ ಜಯದ ಕೇಕೆ ಹಾಕಿದರು.

ನಾಯಕ ಜೋಸ್ ಬಟ್ಲರ್ 80 ರನ್ ಗಳಿಸಿ ಬ್ಯಾಟಿಂಗ್ ಬಲ ತೋರಿದರು. 49 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಗಳು ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿದ್ದವು. ಇವರಿಗೆ ಭರ್ಜರಿ ಸಾಥ್ ನೀಡಿದ ಅಲೆಕ್ಸ್ ಹೇಲ್ಸ್ 86 ರನ್ ಗಳಿಸಿದರು. 47 ಎಸೆತಗಳಲ್ಲಿ ಈ ಮೊತ್ತ ಅವರು ತನ್ನದಾಗಿಸಿಕೊಂಡರು. ಆಕರ್ಷಕ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ ಗಳು ಒಳಗೊಂಡಿದ್ದವು.

ರನ್ ಗಳಿಸದೇ ತಂಡವನ್ನು ಸಂಕಷ್ಟಕ್ಕೆ ತಳ್ಳಿದ ರೋಹಿತ್:
ಇಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿರುವ ಟೀಂ ಇಂಡಿಯಾಕ್ಕೆ ಆರಂಭಿಕರೇ ಮತ್ತೊಮ್ಮೆ ವಿಲನ್ ಆದರು. ಅದರಲ್ಲೂ ಬಲಿಷ್ಠ ತಂಡಗಳೆದುರು ಗಲ್ಲಿ ಕ್ರಿಕೆಟರ್ನಂತೆ ಬ್ಯಾಟ್ ಬೀಸುವ ಉಪನಾಯಕ ರಾಹುಲ್ ಈ ಪಂದ್ಯದಲ್ಲೂ ಒಂದಂಕ್ಕಿಗೆ ಸುಸ್ತಾಗಿ ಕೇವಲ 2ನೇ ಓವರ್ನಲ್ಲೇ ಪೆವಿಲಿಯನ್ಗೆ ಮರಳಿದರು. ಅವರಂತೆಯೇ ಇಡೀ ಟೂರ್ನಿಯಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ನಾಯಕ ರೋಹಿತ್ ಶರ್ಮಾ ಕೂಡ ಅಟ್ಟರ್ ಫ್ಲಾಪ್ ಆದರು. ಇಂಗ್ಲೆಂಡ್ ಎದುರು 28 ಎಸೆತಗಳಲ್ಲಿ ಕೇವಲ 27 ರನ್ ಗಳಿಸಿದ ರೋಹಿತ್ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಕೆಲಸ ಮಾಡಿದರು.

ಸೆಮಿಫೈನಲ್ ಸೇರಿದಂತೆ, ರೋಹಿತ್ ಶರ್ಮಾ ಈ ಟಿ20 ವಿಶ್ವಕಪ್ನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಕೇವಲ 116 ರನ್ ಮಾತ್ರ ಗಳಿಸಿದ್ದಾರೆ. 20 ರ ಸರಾಸರಿ ರನ್ ಗಳಿಸಿರುವ ರೋಹಿತ್ 106.42 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!