';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಾಸರಗೋಡು: ತಾಯಿ ಮತ್ತು ಮಗುವಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ 3 ವರ್ಷದ ಪುಟ್ಟ ಮಗುವೊಂದು ಬಸ್ಸಿನ ಚಕ್ರದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡುವಿನ ಚೆರ್ಕಳ ಎಂಬಲ್ಲಿ ಇಂದು ಸಂಭವಿಸಿದೆ.
ಮೃತಪಟ್ಟ ಬಾಲಕನನ್ನು ಪೆರಿಯತ್ತಡುಕ್ಕಮ್ ನಿವಾಸಿ ಆಶಿಕ್ ರವರ ಸುಪುತ್ರ ಅಬ್ದುಲ್ ವಾಹಿದ್(3) ಎಂದು ಗುರುತಿಸಲಾಗಿದೆ.
ಚೆರ್ಕಳ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ 4 ರ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗುವಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದು ಮಗುವಿನ ಮೇಲೆಯೇ ಬಸ್ಸು ಹರಿಯುತ್ತದೆ ಇದರ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಚಕ್ರದೆಡೆಯಲ್ಲಿ ಸಿಲುಕಿದ ಮಗುವನ್ನು ಜಾಕ್ ಬಳಸಿ ಹೊರ ತೆಗೆಯಲಾಗಿದ್ದು ತಕ್ಷಣವೇ ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಬಾಲಕ ಮೃತಪಟ್ಟಿದ್ದಾನೆ.
ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.