ಮಂಗಳೂರು: ದ.ಕ ಜಿಲ್ಲೆಯ ಮುಸ್ಲಿಂ ಸಮುದಾಯದ ಅತ್ಯುನ್ನತ ನಾಯಕ ಸಾಮಾಜಿಕ ಧಾರ್ಮಿಕ ಮುಂದಾಳು ನೌಷಾದ್ ಹಾಜಿ ಸೂರಲ್ಪಾಡಿ ಇಂದು ಬೆಳ್ತಂಗಡಿಯ ವೇಣೂರುನಲ್ಲಿ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದು, ನೌಷಾದ್ ಹಾಜಿ ರವರ ಮೃತದೇಹದ ಅಂತಿಮ ದರ್ಶನಕ್ಕೆ ಇದೀಗ ಸೂರಲ್ಪಾಡಿ ಮಸೀದಿ ವಠಾರ ಜನ ಸಾಗರದಿಂದ ತುಂಬಿ ಹೋಗಿದೆ.
ಸಾಮುದಾಯಿಕ ಸೇವೆಗಳಲ್ಲಿ ದ.ಕ ಜಿಲ್ಲೆಯ ಮನೆ ಮಾತಾಗಿದ್ದ ನೌಷಾದ್ ಹಾಜಿ ಬಡವ ಬಲ್ಲಿದರ ಆಶಾ ಕೇಂದ್ರವಾಗಿತ್ತು.
30-35 ವರ್ಷಗಳಾದರೂ ಮದುವೆಯಾಗದ ಅದೆಷ್ಟೋ ಹೆಣ್ಣು ಮಕ್ಕಳ ಪಾಲಿಗೆ ಆಶ್ರಯವಾದ ನೌಷಾದ್ ಹಾಜಿ “ನಂಡೋ ಪೆಙಳ್” ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ವಯಸ್ಸಿನ ಮಿತಿ ಕಳೆದ ಹಲವಾರು ಹೆಣ್ಣು ಮಕ್ಕಳನ್ನು ವಿವಾಹಕ್ಕೆ ನೆರವಾಗಿದ್ದಾರೆ.
ನೌಷಾದ್ ಹಾಜಿ ರವರ ಅಕಾಲಿಕ ಮರಣಕ್ಕೆ ಇಡೀ ಸಮುದಾಯ ಕಣ್ಣೀರು ಹಾಕುತ್ತಿದ್ದು, ಹಾಜಿ ರವರ ಮೃತದೇಹ ಸೂರಲ್ಪಾಡಿ ತಲುಪುತ್ತಿದ್ದಂತೆ ಜನಸಾಗರವೇ ಹರಿದು ಬಂದಿದೆ.
7:30pm ಸುಮಾರಿಗೆ ಮೃತದೇಹ ಸೂರಲ್ಪಾಡಿ ಮಸೀದಿಗೆ ಬಂದಿದ್ದು, ಮೊದಲು ಮಹಿಳೆಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದಾದ ನಂತರ ಪುರುಷರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಿದ್ದು, ಇಶಾಹ್ ನಮಾಝ್ ನಂತರ ದಫನ್ ಕಾರ್ಯ ನಡೆಯಲಿದೆ.
ಪೊಲೀಸರು ಸಹಿತ ಸ್ವಯಂ ಸೇವಕರು ವಾಹನ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು ಕೆಲವು ಕಡೆ ಟ್ರಾಫಿಕ್ ಜಾಮ್ ಗಳು ಉಂಟಾಗಿವೆ.