ಪ್ರಪಂಚದ ಅತೀ ಎತ್ತರದ ಜಲಪಾತಗಳಲ್ಲಿ ವಿಕ್ಟೋರಿಯಾ ಜಲಪಾತದಲ್ಲಿರುವ ಡೆವಿಲ್ ಪೂಲ್ ಕೂಡ ಒಂದು. 355 ಅಡಿ ಎತ್ತರದಲ್ಲಿರುವ ಈ ಜಲಪಾತದಂಚಿನಲ್ಲಿ ಯುವತಿಯೊಬ್ಬಳು ಹೀಗೆ ಆನಂದವನ್ನು ಅನುಭವಿಸುತ್ತಿದ್ದಾಳೆ. ನೋಡಲೇನೋ ರೋಮಾಂಚಕಾರಿ ದೃಶ್ಯ. ಆದರೆ ನೋಡಿದ ಯಾರಿಗೂ ಇದರ ಆಳ ಧುಮುಕು ಭಯ ತರದೇ ಇರದು.
ಡಿಸೆಂಬರ್ 20ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 67 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 16,5000 ಜನರು ರೀಟ್ವೀಟ್ ಮಾಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ವೀಡಿಯೋ ನೋಡಿ!
ಆದರೂ ಹರಿಯುತ್ತಿರುವ ನೀರಿನಲ್ಲಿ ಈ ಯುವತಿ ನಿರಾಯಾಸವಾಗಿ ಹೇಗೆ ಮಲಗಿದ್ದಾಳೆ ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೆ? ಇದೇನಿದ್ದರೂ ಸಾಹಸಪ್ರಿಯರಿಗೆ ಮಾತ್ರ ಮೀಸಲು ಎಂದು ನೀವಂದುಕೊಳ್ಳಬಹುದು. ಆದರೆ ಇದರ ಹಿಂದಿನ ನಿಜವಾದ ತಂತ್ರ ಬೇರೆಯೇ ಇದೆ.
ಈ ಡೆವಿಲ್ ಪೂಲ್ ವಿಕ್ಟೋರಿಯನ್ ಜಲಪಾತದ ಅಂಚಿನಲ್ಲಿ ಸಹಜವಾಗಿ ನಿರ್ಮಿತವಾಗಿರುವ ಅಷ್ಟೇನು ಆಳವಲ್ಲದ ಕೊಳವಾಗಿದೆ. ಜೂನ್ನಿಂದ ಡಿಸೆಂಬರ್ ಮಧ್ಯೆ ಜಾಂಬೇಜಿ ನದಿಯ ಹರಿವು ನಿಧಾನ ಗತಿಯಲ್ಲಿರುತ್ತದೆ. ಹಾಗಾಗಿ ಈಜು ಬರುವವರನ್ನು ಮತ್ತು ಧೈರ್ಯವಿರುವ ಜನರನ್ನು ಮಾತ್ರ ವೃತ್ತಿಪರ ಮಾರ್ಗದರ್ಶನದಲ್ಲಿ ಡೆವಿಲ್ ಪೂಲ್ನ ಬಳಿ ಹೋಗಲು ಇಲ್ಲಿ ಅನುಮತಿ ನೀಡಲಾಗುತ್ತದೆ.
ನನ್ನ ಸ್ನೇಹಿತನೊಬ್ಬ ಹೀಗೆ ಫೋಟೋ ತೆಗೆಸಿಕೊಳ್ಳಲು ಹೋಗಿ ಬಿದ್ದು ಸತ್ತೇ ಹೋದ. ಇಲ್ಲಿ ಫೋಟೋ ತೆಗೆಸಿಕೊಳ್ಳುವುದು ಅಷ್ಟು ಮುಖ್ಯವಲ್ಲ, ಇಂಥ ಹುಚ್ಚು ಸಾಹಸಕ್ಕೆ ಈಡಾಗಬೇಡಿ ಎಂದು ಮತ್ತೊಬ್ಬರು ಹೇಳಿದ್ಧಾರೆ. ನಾನು ಕೂಡ ಇಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಬಂದಿದ್ದೇನೆ ಎಂದು ಕೆಲವರು ಹೇಳಿದ್ಧಾರೆ. ಒಮ್ಮೆಯಾದರೂ ನಾನಿಲ್ಲಿಗೆ ಹೋಗಿ ಹೀಗೆ ಫೋಟೋ ತೆಗೆಸಿಕೊಳ್ಳಬೇಕು ಎಂದಿದ್ದಾರೆ ಹಲವರು.
ಇದು ಅಪಾಯಕಾರಿ ಜಲಪಾತ. ಇಲ್ಲಿ ಹೀಗೆಯೇ ಯಾರನ್ನೂ ಬಿಡುವುದಿಲ್ಲ. ಇಷ್ಟು ಎತ್ತರದ ಜಲಪಾತದ ಅಂಚಿಗೆ ಹೀಗೆ ನಿರಾಯಾಸವಾಗಿ ಮಲಗಲು ಯಾರಿಗೂ ಸಾಧ್ಯವೇ ಇಲ್ಲ. ಮಲಗಿದಾಗ ನಿಮ್ಮ ಕಾಲುಗಳನ್ನು ಹಿಡಿದುಕೊಳ್ಳಲಾಗುತ್ತದೆ. ನಂತರ ನಿಮ್ಮ ಮೊಬೈಲ್ನಿಂದ ಫೋಟೋ ಅಥವಾ ವಿಡಿಯೋ ಮಾಡಿಕೊಡಲಾಗುತ್ತದೆ ಎಂದಿದ್ದಾರೆ ಒಬ್ಬರು. ನನ್ನ ಮಗಳೂ ಇಲ್ಲಿಗೆ ಹೋಗಿ ಬಂದಿದ್ದಾಳೆ. ಅವಳದೂ ಇದೇ ಅನುಭವ ಎಂದಿದ್ದಾರೆ ಮತ್ತೊಬ್ಬರು.