ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜದ ಜನತಾ ಕಾಲೋನಿಯಲ್ಲಿ ಸಂಜೆ ಹೊತ್ತಿಗೆ ಮನೆಯ ಮುಂಬಾಗದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದ್ದು ಮನೆಯವರು ಭಯಗೊಂಡು ಸ್ನೇಕ್ ಮಾಸ್ಟರಿಗೆ ಕರೆ ಮಾಡಿ ಹಾವನ್ನು ಸೆರೆ ಹಿಡಿದ ಘಟನೆಯೊಂದು ಇದೀಗ ಸಂಜೆ ನಡೆದಿದೆ.

ಮನೆಯವರು ಸಂಜೆ ಹೊತ್ತಿಗೆ ಮನೆಯ ಹೊರಭಾಗಕ್ಕೆ ಬಂದಾಗ ನಾಗರ ಹಾವೊಂದು ಮನೆಗೆ ಸುತ್ತು ಬರುತ್ತಿರುವುದು ಕಂಡು ಬಂದಿದ್ದು ತಕ್ಷಣವೇ ಕುಟುಂಬ ಸದಸ್ಯರಿಗೆ ಕರೆ ಮಾಡಿ ತಿಳಿಸಿದ್ದು ತಕ್ಷಣವೇ ಕಾರ್ಯ ಪ್ರವೃತರಾಗಿದ್ದ ಆಶೀಕ್‌ರವರು ಸ್ನೇಕ್ ಮಾಷ್ಟರ್ ಫಾಯಿಝ್ ರವರಿಗೆ ನಾಗರ ಹಾವೊಂದು ಹುತ್ತದಲ್ಲಿ ಕೂತಿದೆಯೆಂದು ಕರೆ ಮಾಡಿ ತಿಳಿಸಿದ್ದು ಕ್ಷಣ ಮಾತ್ರದಲ್ಲಿ ಬಂದು ತಲುಪಿದ ಮಾಷ್ಟರ್‌ವರು ಕಾರ್ಯ ಪ್ರವೃತರಾಗಿದ್ದಾರೆ.


ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಆಶ್ಚರ್ಯ ಎಂಬಂತೆ ಒಂದೇ ಹುತ್ತದಲ್ಲಿ ಎರಡು ನಾಗರ ಹಾವು ಅಡಗಿ ಕೂತಿರುವುದು ಕಂಡು ಬಂದಿದೆ.
ಒಂದನ್ನು ಹಿಡಿದ ಮಾಷ್ಟರ್ ಮತ್ತೆ ಇನ್ನೊಂದನ್ನು ಹಿಡಿಯಲು ಹೊರಟಿದ್ದು ಮತ್ತೆ ಎರಡನೇ ನಾಗರ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸುತ್ತ ಮುತ್ತಲಿನ ಪರಿಸರದಲ್ಲಿ ಅನೇಕ ಮನೆಗಳಿದ್ದು ಎಲ್ಲರ ಮನೆ ಮನೆಗೂ ಈ ಹಾವು ಹಲವು ದಿನಗಳಿಂದ ತೆರಳುತ್ತಿದ್ದು ಇದೀಗ ಈ ಮನೆಯವರ ಎಚ್ಚರಿಕೆಯ ಪ್ರವರ್ತಿಯಿಂದ ಊರಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಹಾವನ್ನು ಸೆರೆ ಹಿಡಿದ ವಿಷಯ ಅಕ್ಕಪಕ್ಕದ ಜನರಿಗೆ ತಿಳಿಯುತ್ತದ್ದಂತೆ ನೋಡಲು ಮುಗಿಬಿದ್ದ ಘಟನೆಯು ನಡೆಯಿತು.ವೀಡಿಯೋ ನೋಡಿ 👇
ಹಾವನ್ನು ಸೆರೆ ಹಿಡಿಯುವ ಅಧ್ಬುತ ದೃಶ್ಯವನ್ನು ಡಿಟಿವಿ ಕನ್ನಡ ತಂಡದವರು ಸೆರೆಹಿಡಿದಿದ್ದು ಈ ವೀಡಿಯೋ ವಿಕ್ಷಿಸುವವರ ಎದೆ ಝಲ್ ಎನಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಮನೆಗೆ ಅಥವಾ ನೀವಿರುವ ಸ್ಥಳಗಳಿಗೆ ಹಾವು ಬಂದಲ್ಲಿ ಫಾಝಿಲ್ ರವರನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ. ಕರೆಮಾಡಬೇಕಾದ ನಂಬರ್ 9148521275