';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಸವಣೂರು ಸಮೀಪದ ಸರ್ವೆ ತಿರುವಿನಲ್ಲಿ ಇದೀಗ(9:30pm) ನಡೆದಿದೆ.
ಗಂಭೀರ ಗಾಯಗೊಂಡವರನ್ನು ಕಡಬ ಮೂಲದವರು ಎಂದು ತಿಳಿದು ಬಂದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆ ಹೋಗುತ್ತಿದ್ದಾಗ, ಸರ್ವೆ ಸಮೀಪ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿದ್ದು, ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಪುತ್ತೂರು ಕಂಬಳ ವೀಕ್ಷಿಸಲು ತೆರಲುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಯಾರೊಬ್ಬರು ಸಹಾಯಕ್ಕೆ ಬಾರಲಿಲ್ಲ.
ಕೊನೆಗೆ ಆ ರಸ್ತೆಯಲ್ಲಿ ಬಂದ ಕುಂತೂರಿನ ಯುವಕರು ಆಂಬ್ಯೂಲೆನ್ಸ್’ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಗಾಯಗೊಂಡವರನ್ನು SKSSF ಆಂಬ್ಯೂಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.