dtvkannada

Category: ಜಿಲ್ಲೆ

ಮೆಲ್ಕಾರ್: ತೋಟದಲ್ಲಿ ಕೆಲಸ‌ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಶಾಕ್ ತಗುಲಿ ಬೋಳಿಯಾರಿನ ಯುವಕ ಮೃತ್ಯು

ಮಂಗಳೂರು: ತೋಟದ ಕೆಲಸಕೆಂದು ತೆರಳಿದ ಯುವಕನೋರ್ವ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಆಲಂಪಾಡಿ ಎಂಬಲ್ಲಿ ಇಂದು ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ದುರ್ದೈವಿಯನ್ನು ಬೋಳಿಯಾರು ನಿವಾಸಿ ಇಬ್ರಾಹೀಮ್ ರವರ ಮಗ ಶಾಫಿ (29) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ…

ಪುತ್ತೂರು: ದರ್ಬೆತ್ತಡ್ಕದಲ್ಲಿ ಮರ ಕಡಿಯುವ ಸಂದರ್ಭ ಮರದ ಗೆಲ್ಲು ತಲೆಗೆ ಬಡಿದು ಒರ್ವ ಮೃತ್ಯು

ದರ್ಬೆತ್ತಡ್ಕ: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ಮನೆಯ ಹಿತ್ತಲಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಮರದ ಗೆಲ್ಲು ತಲೆಗೆ ಬಡಿದು ಸ್ಥಳದಲ್ಲೇ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ಸುಮಾರು ಐದು ಗಂಟೆಗೆ ಮನೆಯ ಹಿಂಬಾಗದಲ್ಲಿ ಮರ…

ಲಾರಿಗಳನ್ನು ಅಡ್ಡಗಟ್ಟಿ 200,300 ರೂಪಾಯಿ ವಸೂಲು ಮಾಡುತ್ತಿದ್ದ ಪೊಲೀಸರು; ದಂಧೆ ನಡೆಸುತ್ತಿದ್ದ ದೃಶ್ಯ ಮೊಬೈಲಿನಲ್ಲಿ ಸೆರೆ

ಒರ್ವ ಎಎಸ್ಐ ಮತ್ತು ಇಬ್ಬರು ಪೊಲೀಸರು ಅಮಾನತು

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಓರ್ವ ಎಎಸ್ಐ ಸೇರಿ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ ಬಗ್ಗೆ ವರದಿಯಾಗಿದೆ. ತುಮಕೂರಿನ ಕಳ್ಳಂಬೆಳ್ಳ ಠಾಣೆಯ ಎಎಸ್ಐ ಚಿದಾನಂದ ಸ್ವಾಮಿ ಹಾಗೂ ಪೊಲೀಸ್ ಜೀಪ್ ಚಾಲಕ ಚಿಕ್ಕಹನುಮಯ್ಯ ಅವರನ್ನು ಅಮಾನತು ಮಾಡಿ…

ದ.ಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕ ಆತ್ಮಹತ್ಯೆಗೆ ಶರಣು

ಮಂಗಳೂರು: ದ.ಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಚಾಲಕನನ್ನು ಬಂಗ್ರಕೂಳೂರು ಮಾಲಾಡಿ ಕೋರ್ಟ್‌ ಬಳಿಯ ನಿವಾಸಿ ಬಾಲಕೃಷ್ಣ (58) ಎಂದು ಗುರುತಿಸಲಾಗಿದ್ದು ಗುರುವಾರ ತಮ್ಮ ಮನೆ ರಾಘವೇಂದ್ರ ನಿಲಯದಲ್ಲಿ ನೇಣು…

ಲಾರಿ ಬೈಕ್ ನಡುವೆ ಭೀಕರ ಅಪಘಾತ; ಮೂವರು ದಾರುಣ ಮೃತ್ಯು

ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಮೂವರನ್ನು ಬಲಿ ತೆಗೆದುಕೊಂಡ ಘಟನೆ ನಡೆದಿದೆ. ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ ಸೇರಿದಂತೆ ಮೂವರು ಸಾವನ್ನಪ್ಪಿರುವಂತಹ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಬಳಿ ಸಂಭವಿಸಿದೆ.…

ಮಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಮಂಗಳೂರನ್ನು ತಂಪಾಗಿಸಿದ ಮಳೆರಾಯ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಬಾರ ಕುಸಿತ ಹಿನ್ನಲೆ ಮಂಗಳೂರಿನಲ್ಲಿ ಇಂದು ಸಂಜೆ 7 ರ ಹೊತ್ತಿಗೆ ಧಾರಾಕಾರ ಮಳೆ ಸುರಿದಿದೆ.ಈ ನಿಟ್ಟಿನಲ್ಲಿ ಬಿಸಿಲ ಬೇಗೆಯಿಂದ ಬಳಳುತ್ತಿದ್ದ ಮಂಗಳೂರಿಗೆ ಮಳೆ ನೀರು ತಂಪೆರೆಗಿದಂತ್ತಾಗಿದೆ. ಈ ಮುಂಚೆಯೇ ಹವಾಮಾನ ಇಲಾಖೆ ಅರಬ್ಬೀ ಸಮುದ್ರದಲ್ಲಿ ವಾಯುಬಾರ…

ಉಳ್ಳಾಲ: ಗೃಹಪ್ರವೇಶ ನಡೆದು ಐದೇ ದಿನದಲ್ಲಿ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ

ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಬರೀ ಐದೇ ದಿನದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. ಮೂಲತ: ಪರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ…

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಿದ ರಾಜ್ಯ ಸರಕಾರ

ಐಪಿಎಸ್ ಅಲೋಕ್ ಕುಮಾರ್ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಸೇರಿ ಹಿರಿಯ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರವು ಬುಧವಾರ ಆದೇಶ ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆಲೋಕ್ ಕುಮಾರ್ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ…

ಹಾಸ್ಟೆಲ್ ವಿದ್ಯಾರ್ಥಿನಿಯ ಅತ್ಯಾಚಾರ ನಡೆಸಿ ಕೊಲೆ‌; ಮೃತದೇಹ ಅಡಗಿಸಿಟ್ಟು ಪರಾರಿಯಾದ ಆರೋಪಿ

ಅದೇ ಹಾಸ್ಟೆಲಿನ ಸೆಕ್ಯುರಿಟಿ ಗಾರ್ಡ್ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ; ಏನಿದು ಘಟನೆ, ಓದಿ ಕಂಪ್ಲೀಟ್ ಸ್ಟೋರಿ

ಹಾಸ್ಟೆಲ್‌ನಲ್ಲಿರುವ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರ ಎಸಗಿ, ಕೊಲೆಗೈದಿದ್ದು, ಅದೇ ಹಾಸ್ಟೆಲಿನ ಸೆಕ್ಯುರಿಟಿ ಗಾರ್ಡ್ ಮೃತದೇಹ ಹಾಸ್ಟೇಲ್ ಸಮೀಪದ ರೈಲ್ವೆ ಟ್ರಾಕ್ ಬಳಿ ಪತ್ತೆಯಾಗಿರುವ ರೋಚಕ ಘಟನೆ ಮುಂಬೈನಲ್ಲಿ ನಡೆದಿದೆ. ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಸಂಜೆ ನಾಪತ್ತೆಯಾಗಿದ್ದ ಕುರಿತು ಪೊಲೀಸರಿಗೆ ದೂರು ನೀಡಿದ್ದುಬಳಿಕ…

ಪುತ್ತೂರಿನ ಶಾಸಕರಿಂದ ಭರವಸೆಯ ನಡತೆ; ಏಳು ವರ್ಷಗಳಿಂದ ಯಾರಿಂದಲೂ ಆಗದ ಕೆಲಸವನ್ನು ತಾನು ಮುತುವರ್ಜಿ ವಹಿಸಿ ಚಾಲನೆ ನೀಡಿದ ರೈ

ಕಳೆದ ಏಳು ವರ್ಷಗಳಿಂದ ಬಡ ಜನರನ್ನು ಮನೆ ಕಟ್ಟಲು ಬಿಡದೆ ಸತಾಯಿಸುತ್ತಿದ್ದ ರಾಜಕಾರಣಿಗಳು ಮತ್ತು ಅಧಿಕಾರಿಗಳು..!!

29 ಬಡ‌‌ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಸೂಚನೆ ಕೊಟ್ಟ ಅಶೋಕ್ ರೈ

ಪುತ್ತೂರು: ಸರ್ಕಾರದಿಂದ ಹಕ್ಕುಪತ್ರ ಪಡೆದುಕೊಂಡಿರುವ ಎಲ್ಲಾ ಫಲಾನುಭವಿಗಳಿಗೆ ಮನೆ ನಿವೇಶನ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೂ.6ರಂದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಸೂಚನೆ ನೀಡಿದ್ದಾರೆ. ಈ ಮೂಲಕ…

error: Content is protected !!