dtvkannada

Month: July 2022

ಮಂಗಳೂರು ಸರಣಿ ಹತ್ಯೆ ಹಿನ್ನಲೆ: ಅಲರ್ಟ್ ಆದ ಖಾಕಿ ಪಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಯಿಂದ ಎಚ್ಚೆತ್ತ ಖಾಕಿ ಪಡೆ ಮತ್ತಷ್ಟು ಹೈ ಅಲರ್ಟ್ ಆಗಿದೆ.ನಿನ್ನೆ ರಾತ್ರಿ 8:30 ರ ಹೊತ್ತಿಗೆ ನಡೆದ ಫಾಝಿಲ್ ನ ಹತ್ಯೆ ನಂತರ ಕಾನೂನು ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ…

ಇಂದು ಮಸೀದಿಯಲ್ಲಿ ನಡೆಯುವ ವಿಶೇಷ ಪ್ರಾರ್ಥನೆಗಳಲ್ಲಿ ಸೌಹಾರ್ದ ಸಂದೇಶ ನೀಡಲು ಉಳ್ಳಾಲ ಖಾಝಿ ಕೂರತ್ ತಂಙಳ್ ಮನವಿ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ ಹತ್ಯೆಗಳು ಸಮಾಜವನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ.ಮುಸಲ್ಮಾನರು ಉದ್ರೇಕಕ್ಕೊಳಗಾಗದೆ ಶಾಂತಿ ಕಾಪಾಡಬೇಕೆಂದು ಉಳ್ಳಾಲ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸೆಯ್ಯದ್ ಫಝಲ್ ಕೊಯಮ್ಮ ತಂಙಳ್ ಕೂರ ಹೇಳಿದರು. ಎಲ್ಲೆಡೆ ಶಾಂತಿ…

ಮಂಗಳೂರು: ಶುಕ್ರವಾರದ ವಿಶೇಷ ಪ್ರಾರ್ಥನೆಯನ್ನು ತಮ್ಮ ಹತ್ತಿರದ ಮಸೀದಿಗಳಲ್ಲೇ ನಿರ್ವಹಿಸಿ; ಪೊಲೀಸ್ ಆಯುಕ್ತ ಶಶಿಕುಮಾರ್ ಮನವಿ

ಮಂಗಳೂರು: ಫಾಝಿಲ್ ಹತ್ಯೆಯಿಂದ ಸುರತ್ಕಲ್ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಿದೆ. ಮುಸಲ್ಮಾನ ಬಾಂಧವರು ಶುಕ್ರವಾರದ ವಿಶೇಷ ಪ್ರಾರ್ಥನೆಯನ್ನು ತಮ್ಮ ಹತ್ತಿರದ ಮಸೀದಿಗಳಲ್ಲೇ ನಿರ್ವಹಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಕಮಿಷನರ್ ಶಶಿಕುಮಾರ್ ಮನವಿ…

ಮಂಗಳೂರು: ಮುಖ್ಯಮಂತ್ರಿ ಭೇಟಿ ಬೆನ್ನಲ್ಲೇ ಮುಸ್ಲಿಂ ಯುವಕನ ಬರ್ಬರ ಕೊಲೆ; ದ.ಕ ಜಿಲ್ಲೆಯ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿ

ಮಂಗಳೂರು: ದ.ಕ ಜಿಲ್ಲೆಗೆ ಮುಖ್ಯಮಂತ್ರಿಯ ಭೇಟಿಯ ಬೆನ್ನಲ್ಲೇ ಮುಸ್ಲಿಂ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದು ಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸುರತ್ಕಲ್ ಸಮೀಪದ ಮಂಗಳಪೇಟೆ ನಿವಾಸಿ ಫಾಝಿಲ್ ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ. ನಾಳೆ ತನ್ನ ಹುಟ್ಟು ಹಬ್ಬವನ್ನು…

ಬೆಳ್ಳಾರೆ: ಪ್ರವೀಣ್ ಹತ್ಯೆಯಲ್ಲಿ ಬಂಧನಕ್ಕೊಳಪಟ್ಟ ಸವಣೂರಿನ ಇಬ್ಬರು ಆರೋಪಿಗಳಿಗೆ ನ್ಯಾಯಂಗ ಬಂಧನ..!!

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಬ್ಬರಿಗೆ ಪುತ್ತೂರು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ. ಕಡಬ ತಾಲೂಕಿನ ಸವಣೂರಿನಲ್ಲಿ…

ಮಂಗಳೂರು: ಸುರತ್ಕಲ್’ನಲ್ಲಿ ಮುಸ್ಲಿಂ ಯುವಕನ ಬರ್ಬರ ಹತ್ಯೆ; ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ

ಅಂಗಡಿ ಮುಂದುಗಡೆ ನಿಂತಿದ್ದ ಫೈಝಲ್ ನಿಗೆ ಏಕಾಏಕಿ ತಲ್ವಾರ್ ಮೂಲಕ ದಾಳಿ ನಡೆಸಿದ್ದು ಇದೀಗ ದಾಳಿಯ ಸಿಸಿಟಿವಿ ದೃಶ್ಯ ವೈರಲ್ ಆಗುತ್ತಿವೆ. ಘಟನೆಯ ವಿವರ: ಮುಸ್ಲಿಂ ಯುವಕನೊಬ್ಬನಿಗೆ ಚೂರಿ ಇರಿದ ಘಟನೆ ಸುರತ್ಕಲ್ ನಲ್ಲಿ ಇದೀಗ ನಡೆದಿದ್ದು ಗಂಭೀರವಾಗಿ ಗಾಯಗೊಂಡ ಯುವಕನನ್ನು…

ಮಂಗಳೂರು: ಸುರತ್ಕಲ್’ನಲ್ಲಿ ಮುಸ್ಲಿಂ ಯುವಕನ ಬರ್ಬರ ಹತ್ಯೆ; ಪ್ರವೀಣ್ ಹತ್ಯೆ ಬೆನ್ನಲ್ಲೇ ಮತ್ತೊಂದು ಪ್ರಕರಣ

ಸುರತ್ಕಲ್: ಮುಸ್ಲಿಂ ಯುವಕನೊಬ್ಬನಿಗೆ ಚೂರಿ ಇರಿದ ಘಟನೆ ಸುರತ್ಕಲ್ ನಲ್ಲಿ ಇದೀಗ ನಡೆದಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೃತಪಟ್ಟ ಯುವಕನನ್ನು ಮಂಗಳಪೇಟೆ ನಿವಾಸಿ ಮಾಝಿನ್ (30) ಎಂದು ಗುರುತಿಸಲಾಗಿದೆ.ಸ್ಥಳದಲ್ಲಿ ಬಿಗುವಿನ ವಾತಾವರಣ…

ಪ್ರವೀಣ್‌ ಹತ್ಯೆ ಪ್ರಕರಣ: ಪ್ರಮುಖ ಆರೋಪಿಗೆ ಮುಂದುವರಿದ ಶೋಧ; ಮುತಾಲಿಕ್’ಗೆ ದ.ಕ ಜಿಲ್ಲೆ ಪ್ರವೇಶ ನಿರ್ಬಂಧ

ಮಂಗಳೂರು: ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಸದ್ಯದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 14 ದಿನ ಕಸ್ಟಡಿಗೆ ಕೇಳಲಿದ್ದಾರೆ. ಈ ಪ್ರಕರಣ ಸಂಬಂಧ ಕೆಲವು ಸಾಕ್ಷ್ಯಾಧಾರಗಳ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು,…

ಬಿಜೆಪಿಗೆ ಬಿಸಿ ತುಪ್ಪವಾದ ಕರಾವಳಿ ಹಿಂದುತ್ವ; ತನ್ನದೇ ಅಸ್ತ್ರ ತಿರುಮಂತ್ರ ಆಗಿದ್ದು ಹೇಗೆ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಅಕ್ಷರಶಃ ನಡುಗಿಸಿದೆ. ಬೆಳ್ಳಾರೆ ಪ್ರಕರಣ ಎಷ್ಟು ಬಿಸಿ ಮುಟ್ಟಿಸಿದೆ ಎಂದರೆ ಸಿಎಂ ಮಧ್ಯರಾತ್ರಿ ಸುದ್ದಿಗೋಷ್ಠಿ ಕರೆದು ತಮ್ಮ ಸಾಧನಾ ಸಮಾವೇಶ ಜನೋತ್ಸವ…

ಬಿಜೆಪಿ ಮೋರ್ಚಾ ಸದಸ್ಯನ ಹತ್ಯೆ ಹಿನ್ನಲೆ; ಸಾಮೂಹಿಕ ರಾಜೀನಾಮೆಗೆ ಸಿದ್ದರಾದ ಬಿಜೆಪಿ ಮೋರ್ಚಾ ಸದಸ್ಯರು

ಸುಳ್ಯ: ಹಿಂದೂ ಮುಖಂಡ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನಲೆ ಇದೀಗ ಯುವ ಮೋರ್ಚಾ ಸದಸ್ಯರು ಸಾಮೂಹಿಕ ರಾಜೀನಾಮೆಗೆ ತಯ್ಯಾರಾಗಿದ್ದಾರೆ. ನಮಗೆ ರಕ್ಷಣೆಯಿಲ್ಲದ ಇಲ್ಲಿನ ಸುವ್ಯವಸ್ಥೆಯಲ್ಲಿ ಮುಂದುವರಿಯಲು ನಮ್ಮಿಂದ ಸಾದ್ಯವಿಲ್ಲ ನಾವು ಕೂಡ…

error: Content is protected !!