ಪುತ್ತೂರು: ಪಝಲ್ ಮೆಮೊರೇಬಲ್ ಮೆಡಿಕಲ್ ಹೆಲ್ಫ್ ಲೈನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಕಬಕ ಹಾಗೂ ಬ್ಲಡ್ ಹೆಲ್ಫ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತ ನಿಧಿ ಮಂಗಳೂರು ಇವರ ಸಹಬಾಗಿತ್ವ ದಲ್ಲಿ ಮರ್ಹೂಮ್ ಮಾಸ್ಟರ್ ಪಝಲ್ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ಜುಲೈ 9 ರಂದು ಪುತ್ತೂರಿನ ಕಬಕ ಜಂಕ್ಷನ್ ನಲ್ಲಿರುವ ಬಾಳಿಯೂರ್ ದೋಹ ಬಿಲ್ಡಿಂಗ್ ನಲ್ಲಿ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ನಾಸಿರ್ ಮಾಡಾವು ವಹಿಸಿದ್ದರು. ಖತೀಬ್ ಉಸ್ತಾದ್ ಹಮೀದ್ ಬಾಖವಿಯವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ರಕ್ತ ದಾನದ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಫಝಲ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಫಾರೂಕ್ ಕಬಕ ರವರು ಸಂಸ್ಥೆ ಯ ಇಂದಿನವರೆಗಿನ ಕಾರ್ಯ ಚಟುವಟಿಕೆಯ ವಿವರ ನೀಡಿದರು. ಮುಖ್ಯ ಅತಿಥಿ ಯಾಗಿ ಆಗಮಿಸಿದ ಶಾಕೀರ್ ಅಳಕೆಮಜಲು ರವರು ಇಂತಹಾ ಸಮಾಜ ಮುಖಿ ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.ಫಝಲ್ ಚಾರಿಟೇಬಲ್ ಟ್ರಸ್ಟ್ ನ ಕಾನೂನು ಸಲಹೆಗಾರ ಹನೀಫ್ ಬಗ್ಗುಮೂಲೆ ರವರು ಮರಣ ಹೊಂದಿದ ಮಗುವಿನ ನೆನಪನ್ನು ಜೀವ ಉಳಿಸುವ ಕಾರ್ಯಗಳ ಮುಖಾಂತರ ಮಾಡುವುದು ಬಹಳ ಉತ್ತಮ ಕಾರ್ಯ ಎಂದು ಹೇಳಿದರು. ಬ್ಲಡ್ ಹೆಲ್ಸ್ ಲೈನ್ ಕರ್ನಾಟಕದ ವ್ಯವಸ್ಥಾಪಕರಾದ ಸಿರಾಜ್ ಪರ್ಲಡ್ಕ ಬ್ಲಡ್ ಹೆಲ್ತ್ ಲೈನ್ ಇದರ ಕಾರ್ಯ ವೈಖರಿ ಬಗ್ಗೆ ವಿವರಿಸಿದರು.
ಕಾರ್ಯಕ್ರಮ ದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ರಕ್ತ ದಾನ ಮಾಡಿದರು.ಕಬಕ ಗ್ರಾ.ಪಂ. ಸದಸ್ಯ ರಾದ ಉಮ್ಮರ್ ಫಾರೂಕ್ ರವರ ಮಗು ಪಝಲ್ ಎರಡು ವರ್ಷಗಳ ಹಿಂದೆ ನಿಧನ ಹೊಂದಿದ್ದು ಮಗುವಿನ ಸ್ಮರಣಾರ್ಥ ಪಝಲ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸುವ ಮೂಲಕ ನಿರಂತರ ಹಲವು ಜನಸೇವಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಿಬಿರದಲ್ಲಿ 57 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಶೌಕತ್ ಕಬಕ ಕಾರ್ಯಕ್ರಮ ನಿರೂಪಿಸಿ ಉಸ್ಮಾನ್ ಸ್ವಾಗತಿಸಿ ವಂದಿಸಿದರು.