ಪುತ್ತೂರು: ಕಾವು ಅಮ್ಮಿನಡ್ಕ ಬಳಿ ವಿಷ್ಣು ಕಲ್ಲುರಾಯ ರವರ ಮನೆಯ ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದ ಹತ್ತು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿದ್ದ ಸುಮಾರು 2 ಕ್ವಿಂಟಾಲ್ ಸುಲಿಯದ ಒಣ ಅಡಿಕೆಯನ್ನು ಮತ್ತು ಹುಲ್ಲು ತೆಗಿಯುವ ಮೇಷಿನ್ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಕಾವು ಅಂಚಿನಡ್ಕ ನಿವಾಸಿಗಳಾದ ಸಂತೋಷ್ ಮತ್ತು ಕಿರಣ್ ಕುಮಾರ್ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಬಂಧಿಸಿ ಸುಮಾರು ರೂ 51,000/- ಮೌಲ್ಯದ 1 ಕಿಂಟ್ವಾಲ್ 20 ಕೆಜಿ ಸುಲಿದ ಅಡಿಕೆ ಮತ್ತು ಸುಮಾರು ರೂ 5,000/- ಮೌಲ್ಯದ ಹುಲ್ಲು ತೆಗಿಯುವ ಮೇಷಿನ್ ಹಾಗೂ ಕಳವು ಮಾಡಲು ಉಪಯೋಗಿಸಿದ ಸುಮಾರು ಒಂದು ಲಕ್ಷ ಮೌಲ್ಯದ ಓಮ್ನಿ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ಸಿನಾನ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಒಂದು ಕಳವು ಪ್ರಕರಣವನ್ನು ಭೇದಿಸುವಲ್ಲಿ ಪುತ್ತೂರು ಉಪಾಧೀಕ್ಷಕರಾದ ಡಾ.ಗಾನ ಪಿ.ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ BS ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ,ಎಎಸ್‌ಐ ಮುರುಗೇಶ್, ಸಿಬ್ಬಂದಿಗಳಾದ ಪ್ರವೀಣ್ ರೈ, ಲೋಕೇಶ್, ಜಗದೀಶ್ ,ಬಾಲಕೃಷ್ಣ, ಅದ್ರಾಮ, ಮುನಿಯ ನಾಯ್ಕ, ಚಾಲಕರಾದ ಯೋಗೀಶ್ ಭಾಗವಹಿಸಿದ್ದರು ಎನ್ನಲಾಗಿದೆ.