ಕಡಬ: ಸಾಮಾಜಿಕ ಮತ್ತು ಧಾರ್ಮಿಕ ಸೇವೆಯ ಮೂಲಕ, ಸಮಾಜದಲ್ಲಿ ಹೆಸರುವಾಸಿಯಾದ, ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್ ಶಾಂತಿನಗರ ಸವಣೂರು ಇದರ 21ನೇ ವಾರ್ಷಿಕೋತ್ಸವದ ಪ್ರಯುಕ್ತ, ಎರಡು ದಿನಗಳ ಧಾರ್ಮಿಕ ಉಪನ್ಯಾಸವು ಇದೇ ಬರುವ ದಿನಾಂಕ 11 ಮತ್ತು 12ಕ್ಕೆ, ಸವಣೂರು ಶಾಂತಿನಗರದ “ಮರ್ಹೂಂ ಉಸ್ಮಾನ್ ಕೆಲೆಂಬೀರಿ” ವೇದಿಕೆಯಲ್ಲಿ ಅತ್ಯುಜ್ಯಲವಾಗಿ ನಡೆಯಲಿಕ್ಕಿದೆ.
ಕಾರ್ಯಕ್ರಮದ ಪ್ರಥಮ ದಿನವಾದ ಆದಿತ್ಯವಾರ, ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಉರ್ಸಾಗ್ ಅವರ ದ್ವಜಾರೋಹಣದೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ, ಅಂತಾರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ, ಜೂನಿಯರ್ ಕಬೀರ್ ಬಾಖವಿ ಎಂದೇ ಹೆಸರುವಾಸಿಯಾದ, “ಬಹು/ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ” ಅವರು ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.
ಕಾರ್ಯಕ್ರಮದ ಎರಡನೇ ದಿನವಾದ ಸೋಮವಾರ ರಾತ್ರಿ, ಅಂತಾರಾಷ್ಟ್ರೀಯ ವಾಗ್ಮಿ “ಬಹು/ ನೌಫಲ್ ಸಖಾಫಿ ಕಳಸ” ಇವರು ಮುಖ್ಯ ಪ್ರಭಾಷಣವನ್ನು ಮಾಡಲಿಕ್ಕಿದ್ದಾರೆ. ಕಾರ್ಯಕ್ರಮದಲ್ಲಿ, ಹಲವಾರು ಸಾಮಾಜಿಕ, ಧಾರ್ಮಿಕ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಡಿಟಿವಿ ಕನ್ನಡ ಚಾನೆಲಿನಲ್ಲಿ ನೇರಪ್ರಸಾರ ನೀಡಲಾಗುವುದು.
ಸಮಾರೋಪ ಸಮಾರಂಭ ದುವಾ ಆಶಿರ್ವಚನ ಎನ್.ಪಿ.ಎಂ ಸಯ್ಯದ್ ಜಲಾಲುದ್ದೀನ್ ತಂಙಲ್ ಅಲ್ ಬುಖಾರಿ ಕುನ್ನಂಕ್ಯೆ ನೆರವೇರಿಸಲಿದ್ದು ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಲಿಕ್ಕಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸವಂತೆ ಸಂಘಟಕರು ವಿನಂತಿಸಿದ್ದಾರೆ.