ಉಪ್ಪಿನಂಗಡಿ: SSF ಕರ್ನಾಟಕ ರಾಜ್ಯ ಸಾಹಿತ್ಯೋತ್ಸವದಲ್ಲಿ ಪ್ರಥಮ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಮ್ಮಾಸ್ T.K ಸಿನಾನ್ B.T ಮತ್ತು ಅನ್ಸಾರ್ T.H ರವರಿಗೆ ತನ್ನ ಹುಟ್ಟೂರಿನಲ್ಲಿ ಅದ್ದೂರಿಯ ಸ್ವಾಗತ ನೀಡಲಾಯಿತು.
![](https://dtvkannada.in/wp-content/uploads/2024/02/IMG-20240212-WA0143-1024x576.jpg)
ಸ್ಕೌಟ್ಸ್ ಗೈಡ್ಸ್ ಮತ್ತು ದಫ್ ಗಳೊಂದಿಗೆ ತೆಕ್ಕಾರು ಮದ್ರಸಾ ವಠಾರಕ್ಕೆ ಪ್ರತಿಭೆಗಳನ್ನು ಹಿದಾಯತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸಾದ S,B,S ವಿದ್ಯಾರ್ಥಿಗಳು ಬರಮಾಡಿಕೊಂಡರು.
ಹೂಗುಚ್ಚ ಮತ್ತು ಹಣದ ಮಾಲೆ ನೀಡುವ ಮೂಲಕ ತನ್ನ ಹುಟ್ಟೂರು ಪ್ರತಿಭೆಗಳನ್ನು ಅದ್ದೂರಿಯಿಂದ ಬರಮಾಡಿಕೊಂಡಿತು.
ಕಾರ್ಯಕ್ರಮವನ್ನುದ್ದೇಶಿಸಿ ಸ್ಥಳೀಯ ಖತೀಬ್ ಮಜೀದ್ ಸಖಾಫಿ ಅಮ್ಮುoಜೆ, ಪ್ರಿನ್ಸಿಪಾಲ್ ಇಸಾಕ್ ಮದನಿ ಅಳಕ್ಕೆ, ಉಸ್ಮಾನ್ ಸಹದಿ ತೆಕ್ಕಾರು ಹಾಗು ಇನ್ನಿತರು ಪ್ರಶಂಸನೀಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಕೋಶಧಿಕಾರಿ ರಶೀದ್ T.h ಕಾರ್ಯದರ್ಶಿ ನಝಿರ್ T.k ಉಪಾಧ್ಯಕ್ಷ ಕಾಸಿಮ್ ಕನರಾಜೆ ಮತ್ತಿತ್ತರು ಉಪಸ್ಥಿತರಿದ್ದರು.
ಜಮಾಲುದ್ದಿನ್ ಹುಮೈದಿ ಸ್ವಾಗತಿಸಿ ವಂದಿಸಿದರು.