ರಿಯಾದ್: ಅಲ್ ಮದೀನತುಲ್ ಮುನವ್ವರ ಮೂಡಡ್ಕ, ಮಸ್ನಾ, ರಿಯಾದ್ ಸಮಿತಿಯ ವಾರ್ಷಿಕ ಮಹಾಸಭೆಯು ಬಹು ಅಬ್ದುಲ್ ರಝಾಕ್ ಉಸ್ತಾದ್ ಮಾಚಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾಸಿಕ ಮಹ್ಳರತುಲ್ ಬದ್ರಿಯಾ ಸ್ವಲಾತ್ ಮಜ್ಲಿಸಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾರಿಸ್ ಸಖಾಫಿಯವರು ಖಿರಾಅತ್ ಪಠಿಸಿದರು.
ಕೆ.ಸಿ.ಎಫ್ ನೇತಾರರೂ ಲತ್ವೀಫಿಯಾ ಸ್ಥಾಪನೆಯ ಆರ್ಗನೈಝರ್ ಸಿದ್ದೀಖ್ ಸಖಾಫಿ ಪೆರುವಾಯಿ ರವರು ಸಂಘಟನೆ ಮತ್ತು ಸ್ಥಾಪನೆಗಳ ಆವಶ್ಯಕತೆ ಮತ್ತು ಫ್ರಾಮುಖ್ಯತೆಗಳನ್ನು ವಿವರಿಸುತ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸ್ಥೆಯ ಜನರಲ್ ಮಾನೇಜರ್ ಅಶ್ರಫ್ ಸಖಾಫಿ ಮಾಡಾವು ಸಂಸ್ಥೆಯ ಪರಿಚಯವನ್ನು ಮಾಡಿಸುತ್ತಾ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಹೊಸ ಯೋಜನೆಗಳ ಬಗ್ಗೆ ವಿವರಿಸುತ್ತಾ ಎಲ್ಲರೂ ತಮ್ಮ ಸಹಾಯ ಸಹಕಾರವನ್ನು ನೀಡಬೇಕೆಂದು ಹೇಳಿದರು.
ನಂತರ ಹಬೀಬುಲ್ಲಾ T H ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ರಿಯಾದಿನಲ್ಲಿರುವ ಮೂರು ಸಮಿತಿಯನ್ನು ಒಂದುಗೂಡಿಸಿ ಹೊಸ ರಿಯಾದ್ ಸಮಿತಿಯನ್ನು ರಚಿಸಲಾಯಿತು.
2024 2025 ಅವಧಿಯ ಒಟ್ಟು 28 ಸದಸ್ಯರನ್ನೊಳಗೊಂಡ ಹೊಸ ಸಮಿತಿಯನ್ನು ರಚಿಸಲಾಯಿತು:
ನೂತನ ಸಮಿತಿಯ
ಅಧ್ಯಕ್ಷರಾಗಿ ಯೂಸುಫ್ ಹಾಜಿ ಕಳಂಜಿಬೈಲು
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಮಠ
ಕೋಶಾಧಿಕಾರಿಯಾಗಿ ರಫೀಖ್ ಸರಳಿಕಟ್ಟೆ ಯವರನ್ನು ಆಯ್ಕೆ ಮಾಡಲಾಯಿತು.
ಕೆ.ಸಿ.ಎಫ್ ರಿಯಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಬಶೀರ್ ಹಾಜಿ ಲೈಲಾ, ದಾವೂದ್ ಹಾಜಿ ಕಜೆಮಾರ್ ಹಿತೋಪದೇಶಗಳೊಂದಿಗೆ ಹೊಸ ಸಮಿತಿಗೆ ಶುಭ ಹಾರೈಸಿದರು.
ಸಂಸ್ಥೆಯ ಆರ್ಗನೈಝರ್ ಅಬ್ದುಲ್ ಕರೀಮ್ ಲತ್ವೀಫಿ ಸ್ವಾಗತಿಸಿ ವಂದಿಸಿದರು.