ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ವಿದ್ಯಾರ್ಥಿಯೋರ್ವ ಚೂರಿ ಚೂರಿದಿದ್ದು ಗಾಯಗೊಂಡ ವಿದ್ಯಾರ್ಥಿಯನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಸ್ಲಿಂ ವಿದ್ಯಾರ್ಥಿಯೊಬ್ಬಳಿಗೆ ಹಿಂದೂ ವಿದ್ಯಾರ್ಥಿಯೊಬ್ಬ ಅವಳ ಕೈಗೆ ಚೂರಿಯಿಂದ ಇರಿದು ರಕ್ತಸಿಕ್ತವಾಗಿದ್ದು ಇದನ್ನು ಗಮನಿಸಿದ ಅದೇ ಶಾಲಾ ಪ್ರಾಂಶುಪಾಲರು ಕೈಗೆ ಗ್ಲಾಸು ಬಿದ್ದು ಗಾಯಗೊಂಡಿದೆ ಎಂದು ತಪ್ಪು ಮಾಹಿತಿ ನೀಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿ ಕೊಟ್ಟಿದ್ದು
ಇದೀಗ ನೈಜ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಾಂಶುಪಾಲರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಇದೀಗ ವಿದ್ಯಾರ್ಥಿನಿಯು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ತಕ್ಷಣ ಶಿಕ್ಷಕಿಯನ್ನು ಅಮಾನತು ಗೊಳಿಸಿ ಚೂರಿ ಇರಿದ ಆರೋಪಿಯ ವಿರುದ್ಧ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಗರ ಸಭಾ ಸದಸ್ಯರಾದ ಬಶೀರ್ ಪರ್ಲಡ್ಕ ಆಗ್ರಹಿಸಿದ್ದಾರೆ. ಸರಕಾರಿ ಆಸ್ಪತ್ರೆಯ ಬಳಿ ನೂರಾರು ಸಾರ್ವಜನಿಕರು ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.