ಉಪ್ಪಿನಂಗಡಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಮೃತಪಟ್ಟ ಬಾಲಕನನ್ನು ತುರ್ಕಳಿಕೆ ನಿವಾಸಿ ಮುಸ್ತಫಾ ರವರ ಮಗ ಮುಹಮ್ಮದ್ ತಂಝಿರ್ (14) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ ನಂತರ ಶಾಲೆಯಿಂದ ಸ್ನೇಹಿತರ ಜೊತೆ ಸೇರಿ ನದಿಯಲ್ಲಿ ಈಜಲು ಹೊರಟಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ತಂಝಿರ್ ಕುಟುಂಬದಲ್ಲಿ ಒಂದೇ ತಿಂಗಳ ಅಂತರದಲ್ಲಿ ಇದು ಮೂರನೇ ಮರಣವಾಗಿದ್ದು, ಇಂದು ಮೃತಪಟ್ಟ ಬಾಲಕನ ತಂದೆಯ ತಾಯಿ ಮೃತಪಟ್ಟ ಹತ್ತು ದಿವಸದಲ್ಲಿ ಮುಸ್ತಫಾ ರವರ ತಮ್ಮನ ಪತ್ನಿ ಮೃತಪಟ್ಟಿದ್ದು, ಇದೀಗ ಪುಟ್ಟ ಬಾಲಕ ತಂಝಿರ್ ನ ಅಕಾಲಿಕ ಮರಣದಿಂದಾಗಿ ಕುಟುಂಬಸ್ಥರ ಮತ್ತು ಊರಿಡೀ ಶೋಕ ಸಾಗರ ಆವರಿಸಿದೆ.