dtvkannada

'; } else { echo "Sorry! You are Blocked from seeing the Ads"; } ?>

ಜನಪ್ರಿಯ ಟೆಕ್ ಕಂಪೆನಿ ಆ್ಯಪಲ್ ತನ್ನ ಸ್ಮಾರ್ಟ್​ಫೋನ್ ಸರಣಿಯ ಹೊಚ್ಚ ಹೊಸ ಮೊಬೈಲ್ ಐಫೋನ್ 13 ಸೆಪ್ಟೆಂಬರ್ 14 ರಂದು ಅನಾವರಣಗೊಳಿಸಲಿದೆ. ಮಂಗಳವಾರ ನಡೆಯಲಿರುವ ಆ್ಯಪಲ್ ಈವೆಂಟ್​ನಲ್ಲಿ ಹೊಸ ಫೋನ್ ಹಾಗ ಆ್ಯಪಲ್​ ವಾಚ್ ಸಿರೀಸ್​ 7 ಅನ್ನು ಪರಿಚಯಿಸಲಿದೆ. ಅಷ್ಟೇ ಅಲ್ಲದೆ ಇದೇ ವಾರದಿಂದ ಅಂದರೆ ಸೆಪ್ಟೆಂಬರ್ 17 ರಿಂದ ಆ್ಯಪಲ್​ ಉತ್ಪನ್ನಗಳು ಗ್ರಾಹಕರ ಕೈ ಸೇರಲಿದೆ ಎಂದು ವರದಿಯಾಗಿದೆ.

ಈ ಬಾರಿ ಆ್ಯಪಲ್ ಕಂಪೆನಿ ನಾಲ್ಕು ಮಾಡೆಲ್​ಗಳನ್ನು ಪರಿಚಯಿಸಲಿದ್ದು, ಅದರಂತೆ iPhone 13, iPhone 13 Pro, iPhone 13 Mini ಮತ್ತು iPhone 13 Pro Max ಸ್ಮಾರ್ಟ್​ಫೋನ್​ಗಳು ಖರೀದಿಗೆ ಲಭ್ಯವಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್-13 ಫೋಟೋಗಳು ಹರಿದಾಡುತ್ತಿದ್ದು, ಹೊಸ ಸ್ಮಾರ್ಟ್​ಫೋನ್​ ಬಗ್ಗೆ ಮೊಬೈಲ್​ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಮುಂಬರುವ ಐಫೋನ್ A15 ಚಿಪ್‌ನಿಂದ TSMC ಯ 5nm+ ಪ್ರೊಸೆಸ್ ಹೊಂದಿರಲಿದೆ. ಹಾಗೆಯೇ ಐಫೋನ್ 13 ಶ್ರೇಣಿಯು ಲಿಡಾರ್ ಸೆನ್ಸರ್ ಅನ್ನು ಸಹ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸೆನ್ಸರ್ ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಮೊದಲ ತಲೆಮಾರಿನ ಐಪ್ಯಾಡ್ ಪ್ರೊನಲ್ಲಿ ಪರಿಚಯಿಸಲಾಗಿತ್ತು.

'; } else { echo "Sorry! You are Blocked from seeing the Ads"; } ?>

ಲಿಡಾರ್ ತಂತ್ರಜ್ಞಾನವು ರಿಯಾಲಿಟಿ ಅನುಭವ ಅನುಭವಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ತ್ವರಿತವಾಗಿ ವೀಕ್ಷಿಸಲು ಮತ್ತು ಗುರುತಿಸಲು ಅಪ್ಲಿಕೇಶನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಇದರ ಜೊತೆಗೆ, ಮುಂಬರುವ ಐಫೋನ್ 13 ಸರಣಿಯು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ ಎಕ್ಸ್ 60 5 ಜಿ ಮೋಡೆಮ್ ಅನ್ನು ಹೊಂದಿರಲಿದೆ ಎಂದು ತಿಳಿಸಲಾಗಿದೆ. 5 nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿರುವ X60 ಐಫೋನ್ 12 ಮಾದರಿಗಳಲ್ಲಿ ಬಳಸಲಾಗುವ 7nm ಆಧಾರಿತ ಸ್ನಾಪ್‌ಡ್ರಾಗನ್ X55 ಮೋಡೆಮ್‌ಗೆ ಹೋಲಿಸಿದರೆ ಇದು ಹೆಚ್ಚಿನ ದಕ್ಷತೆ ಮತ್ತು ವೇಗವನ್ನು ಹೊಂದಿರಲಿದೆ.

ಗೆಜೆಟ್ನೌ ಮಾಹಿತಿ ಪ್ರಕಾರ ಐಫೋನ್-13 ಪ್ರೊ 6.1 ಇಂಚಿನ (15.49 cm) OLED ಡಿಸ್ಪ್ಲೇ ಹೊಂದಿರಲಿದ್ದು, iOS v14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಒಟ್ಟು ನಾಲ್ಕು ಕ್ಯಾಮೆರಾ ಇದರಲ್ಲಿರಲಿದ್ದು, ಹಿಂಭಾಗದಲ್ಲಿ 12 MP + 12 MP + 12 MP ಮೂರು ಕ್ಯಾಮೆರಾ ಹಾಗೂ ಸೆಲ್ಫಿಗಾಗಿ ಮುಂಭಾಗದಲ್ಲಿ 12 MP ನೀಡಲಾಗುತ್ತದೆ. ಹಾಗೆಯೇ ಇದು 5ಜಿ ಸ್ಮಾರ್ಟ್ಫೋನ್ ಆಗಿರಲಿದೆ. ಇನ್ನು ನೂತನ ಐಫೋನ್-13 ಬೆಲೆ ಸುಮಾರು 89 ಸಾವಿರದಿಂದ ರೂ. ನಿಂದ ಶುರುವಾಗಲಿದ್ದು, ಐಫೋನ್ 12 ಪ್ರೊಗೆ (1 ಲಕ್ಷ 18 ಸಾವಿರ ರೂ.) ಹೋಲಿಸಿದರೆ ಐಫೋನ್-13 ಬೆಲೆ ಕಡಿಮೆ ಎನ್ನಬಹುದು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!