';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಯುವಕನೊಬ್ಬ ರಬ್ಬರ್ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬ್ರದ ಘಟ್ಟಮನೆ ಸಮೀಪ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಸನ್ಯಾಸಿಗುಡ್ಡೆಯವರಾಗಿದ್ದು ವೃತ್ತಿಯಲ್ಲಿ ಟಿಂಬರ್ ಕೆಲಸ ನಿರ್ವಹಿಸುತ್ತಿದ್ದ ಹೈದರಾಲಿ(೩೫) ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಸ್ಥಳಕ್ಕೆ ಈಗಾಗಲೇ ಸಂಪ್ಯ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಒಂದಷ್ಟು ವರ್ಷಗಳ ಹಿಂದೆ ಈ ವ್ಯಕ್ತಿಯ ಮಗನೋರ್ವ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಇದೀಗ ಇವರು ಮರಣದಿಂದ ಕುಟುಂಬಕ್ಕೆ ಅಘಾತವುಂಟಾಗಿದ್ದು ಇಡೀ ಘಟ್ಟಮನೆ ಮೌನಕ್ಕೆ ಶರಣಾಗಿದೆ.