ಖೋಟಾ ನೋಟು ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿದ ಸಂಪ್ಯ ಪೊಲೀಸರ ತಂಡ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಪುತ್ತೂರು: ಖೋಟಾನೋಟು ಪ್ರಕರಣವೊಂದರಲ್ಲಿ ಆರೋಪಿಯಾಗಿ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಕಲಂದರ್ ಸಿದ್ದೀಕ್(41)ಬಂಧಿತ ಆರೋಪಿ. ಈತ ಖೋಟಾನೋಟು ಪ್ರಕರಣವೊಂದಕ್ಕೆ ಸಂಭಂದಿಸಿ ಸುಮಾರು 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಮೂಲತಃ ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ನಿವಾಸಿ ಮಹಮ್ಮದ್ ಎಂಬವರ ಪುತ್ರ ಕಲಂದರ್ ಸಿದ್ದೀಕ್ 2002 ರಲ್ಲಿ ನಡೆದ ಖೋಟಾ ನೋಟು ಪ್ರಕರಣವೊಂದಕ್ಕೆ ಸಂಭಂಧಿಸಿ ತಲೆಮರೆಸಿಕೊಂಡಿದ್ದ. ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಬೆಳಿಗ್ಗೆ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬಲ್ಲಿ ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ
ಆರೋಪಿಯನ್ನು ಪತ್ತೆಹಚ್ಚಲು ದಕ್ಷಿಣ ಕನ್ನಡ ಜಿಲ್ಲಾ ಮಾನ್ಯ ಪೊಲೀಸ್ ಅಧಿಕ್ಷಕರಾದ ಗಾನಾ ಪಿ ಕುಮಾರ್ (ಪೊಲೀಸ್ ಉಪಾಧಿಕ್ಷಕರು ಪುತ್ತೂರು ವಿಭಾಗ), ಉಮೇಶ್ ಉಪ್ಪಳಿಕೆ ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ರವರ ಮಾರ್ಗದರ್ಶನದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಉದಯರವಿ ಎಂ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅದ್ರಾಮ ಮತ್ತು ಪ್ರವೀಣ್ ರೈ ಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.