ತೋಡಾರ್, ಸೆ.10: ಸಮಸ್ತ ಅಂಗೀಕೃತ ಎರಡು ವರುಷಗಳ ಪಾಳಿಲಾ ಕೋರ್ಸ್ ಜೊತೆ ಆರ್ಟ್ಸ್, ಕೋಮರ್ಸ್ ಮತ್ತು ವಿಜ್ಞಾನ ಪಿಯುಸಿ ವಿದ್ಯಾಬ್ಯಾಸ ಹಾಗೂ ಎರಡು ವರ್ಷಗಳ ಆಳವಾದ ದಾರ್ಮಿಕ ಅದ್ಯಯನಕ್ಕಾಗಿ ಫಾಳಿಲ ಕೋರ್ಸ್ ಗಳಿಗಾಗಿ ತೋಡಾರಿನ ಆದರ್ಶ್ ವಿದ್ಯಾ ಸಂಸ್ಥೆಯಲ್ಲಿ ಪ್ರಾರಂಭಗೊಂಡ ಫಾಳಿಲ ಕೋರ್ಸಿಗೆ ಕಾಲೇಜ್ ವಿದ್ಯಾರ್ಥಿನಿಯರಿಂದ ದಾಖಲಾತಿಯನ್ನು ಪ್ರಾರಂಬಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಆಸಿಫ್ ಸುರಲ್ಪಾಡಿ ತಿಳಿಸಿದರು.
ಗುರುಪುರ ಖತೀಬರಾದ ಬಹು ಜಮಾಲುದ್ದೀನ್ ದಾರಿಮಿ ದುಅ ಆಶೀರ್ವದಿಸಿದರು. ಬಯಲು ಪೇಟೆ ಖತೀಬರಾದ ಬಹು ಶರೀಫ್ ಅರ್ಶದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಸ್ತ ಕೇರಳ ಜಂಹೀಯತುಲ್ ಉಲಮಾದಿಂದ ಅಂಗೀಕೃತಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶರೀಯತ್ ವುಮೆನ್ಸ್ ಕಾಲೇಜಾಗಿದ್ದು, ಗುಣ ಮಟ್ಟದ ಶಿಕ್ಷಣಕ್ಕೆ ಇಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ. ಪಿಯುಸಿ ಯೊಂದಿಗೂ ಫಾಳಿಲ ಮತ್ತು ಪಿಯುಸಿ ಅಲ್ಲದವರಿಗೆ ಶರಿಯತ್ ಕಲಿಸಿಕೊಡಲು
ವಿಶೇಷವಾಗಿ ತರಬೇತುಗೊಂಡ ಅದ್ಯಾಪಕಿಯರಿಂದ ಶಿಕ್ಷಣ ತರಬೇತಿಯನ್ನು ನೀಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷರು ಮಾದ್ಯಮಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಹುಲ್ ಹಮೀದ್ ಹಾಜಿ ಮೆಟ್ರೋ, ಎಮ್.ಎಚ್.ಮೊಹಿಯುದ್ದೀನ್ ಹಾಜಿ ಅಡ್ಡೂರು,ಯು.ಪಿ.ಇಬ್ರಾಹಿಂ ಅಡ್ಡೂರು,ಅಬ್ದುಲ್ ಮಜೀದ್ ಸುರಲ್ಪಾಡಿ, ರಫೀಕ್ ಮಾಸ್ಟರ್ ಸಲೀಂ ಉಡುಪಿ,ವರದಿಗಾರರಾದ ಎಮ್.ಎಸ್ ಮೊಹಮ್ಮದ್ ಮೊದಲಾದ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.
ಆಸಿಫ್ ಪಾರಂಪಳ್ಳಿ, ಏರ್ ಇಂಡಿಯಾ ಉಸ್ಮಾನ್ ಹಾಜಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಶುಭಹಾರೈಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ
8277294732 / 9731569732

